
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪುವೊಂದನ್ನು ನೀಡಿದ್ದು ಅದೇನೆಂದರೆ ರಜೆ ನಗದು ಸೌಲಭ್ಯ ಉದ್ಯೋಗಿಯ ಸಾಂವಿಧಾನಿಕ ಹಕ್ಕು. ರಜೆ ನಗದು ಸೌಲಭ್ಯವನ್ನು ನಿರಾಕರಿಸುವಂತಿಲ್ಲವೆಂದು ಹೇಳಿದೆ.
ನಿವೃತ್ತಿ ವೇತನ, ರಜೆ ನಗದು ಉದ್ಯೋಗಿ ಗಳಿಸಿದ ಆಸ್ತಿಯಾಗಿವೆ. ಹೀಗಾಗಿ ಸಂವಿಧಾನದ ಆರ್ಟಿಕಲ್ 300A ಅಡಿ ಇದು ಉದ್ಯೋಗಿಯ ಹಕ್ಕು. ಕಾನೂನಿನ ಬೆಂಬಲವಿಲ್ಲದೇ ಇಂತಹ ಲೀವ್ ಎನ್‌ಕ್ಯಾಶ್‌ಮೆಂಟ್ ಸೌಲಭ್ಯ ನಿರಾಕರಿಸಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಲಿಂಗನಗೌಡ ಎಂಬ ಉದ್ಯೋಗಿಯನ್ನು ಗ್ರಾಮೀಣ ಬ್ಯಾಂಕ್ ವಜಾಗೊಳಿಸಿತ್ತು. ಈ ಕಾರಣದಿಂದ ಲಿಂಗನಗೌಡ ಅವರ ರಜೆ ನಗದು ಸೌಲಭ್ಯ ನೀಡಲು ಗ್ರಾಮೀಣ ಬ್ಯಾಂಕ್ ನಿರಾಕರಿಸಿತ್ತು. ಹೀಗಾಗಿ ಲಿಂಗನಗೌಡ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ರಜೆ ನಗದು ಕೊಡಿಸುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸಂವಿಧಾನದ ಆರ್ಟಿಕಲ್ 300 A ಅಡಿ ಇದು ಉದ್ಯೋಗಿಯ ಹಕ್ಕು. ಕಾನೂನಿನ ಬೆಂಬಲವಿಲ್ಲದೇ ಇಂತಹ ಸೌಲಭ್ಯ ನಿರಾಕರಿಸಬಾರದು ಎಂದು ಹೇಳಿ ಅರ್ಜಿದಾರರಿಗೆ ರಜೆ ನಗದು ಸೌಲಭ್ಯವನ್ನು ನೀಡುವಂತೆ ಆದೇಶ ಹೊರಡಿಸಿದೆ.