✍🏻ರೇಷ್ಮಾ ಶೆಟ್ಟಿ ಗೊರೂರು.
ಹಾಸನ ಜಿಲ್ಲೆ.

ಶ್ರಾವಣ ಪೌರ್ಣಮಿಯ ಶುಭಪರ್ವದಿನ
ಸಹೋದರ ರಕ್ಷೆ ಬಯಸುವ ಸುದಿನ
ರಕ್ಷಾ ಬಂಧನದ ಹಬ್ಬ ಆಚರಿಸೋಣ
ಸಹೋದರರೆಲ್ಲ ಸಂತಸದಿ ಒಗ್ಗೂಡೋಣ//
ಒಡಹುಟ್ಟಿದವರ ಭದ್ರತೆಯ ಪ್ರೀತಿಬಂಧನ
ಕರುಳಬಳ್ಳಿಯ ವಿಶೇಷ ಸಮ್ಮಿಲನ
ಭ್ರಾತೃ ಪ್ರೇಮದ ಋಣಾನುಬಂಧ ರಕ್ಷಾ ಬಂಧನ
ಕೊಂಡಿ ಬೆಸೆಯುತ ಬಾಳೋಣ ಜೋಪಾನ//
ಅರಶಿನ ಕುಂಕುಮವಿಟ್ಟು ರಾಕಿ ಕಟ್ಟೋಣ
ಅಕ್ಷತೆ ಕಾಳು ಹಾಕಿ ಆರತಿ ಬೆಳಗೋಣ
ಸಹೋದರರೇ ರಕ್ಷೆ ನೀಡಿ ಎಂದು ಬೇಡೋಣ
ಸಿಹಿ ಹಂಚುತ ಸದಾ ಪ್ರೀತಿ ಹೊಂದೋಣ//
ಬರಿಯ ಧಾರವಿಲ್ಲವಿದು ಪವಿತ್ರ ಬಂಧನ
ಹೃದಯ ಅರಿತ ಸೋದರರಿಗೆ ರಕ್ಷೆ ಕಟ್ಟೋಣ
ರಕ್ಷಿಸುತ ಪ್ರೀತಿಸುತ ಬದುಕಲು ಅರಿಯೋಣ
ಸೋದರತೆಯ ಬೆಸುಗೆಯೇ ರಕ್ಷಾ ಬಂಧನ//
====================














