ಪ್ರಜ್ಞಾವಾಣಿ, ಗೋರೆ. ಕಾರ್ಕಳ

ಯೋಗ ನೀನೆಷ್ಟು ಚಂದ.
ಆರೋಗ್ಯ ಕೊಡುವೆ ಕಾಳಜಿಯಿಂದ.
ದೇಹ ಮನಸ್ಸು ನಿರಾಳ ನಿನ್ನಿಂದ.
ಅರಿವಿಗೆ ಕಾರಣ ನಿಲುವಿಂದ.
ರೋಗ ನಶಿಸಲಿ ಯೋಗದಿಂದ.
ನಮ್ಮ ದೇಹಕ್ಕೆ ಶ್ರಮ ಬೇಕು.
ಮುದ್ರೆಗಳನ್ನ ತಿಳಿಯಬೇಕು.
ಪರಿಪೂರ್ಣತೆ ಸಾಧಿಸಬೇಕು.
ಜೀವಕ್ಕೆ ವಾಸ್ತವ ಬೇಕು.
ಮುದ್ರೆಗಳು ರಂಜಿಸಬೇಕು.
ಮನಸ್ಸಿನ ದೃಢತೆಗೆ ಕಾರಣ ನೀನು.
ಆತ್ಮವಿಶ್ವಾಸ ಕೊಡುವೆ ಧ್ಯಾನದಿಂದ.
ಆರೋಗ್ಯದ ಪೂರ್ಣತೆ ನಿನ್ನಿಂದ.
ಮರೆಯದೆ ದಿನಾಲೂ ಬರುವೆ ಯೋಗವೇ.
ಸದೃಢ ವಾಗಿಸು ಯೋಗವೇ.
ಯೋಗವೇ ನೀನಿರುವುದು ನನ್ನ ಯೋಗ.
ನಿಯಮಿತವಾಗಿ ಬಂದು ಬಿಡು.
ಗುರಿಗೆ ನಿರಾಳ ಕೊಟ್ಟು ಬಿಡು.
ಯೋಗವೇ ಜಗದಲ್ಲಿ ನೀ ರಾರಾಜಿಸುತ್ತಿರುವೆ.
ನಿನ್ನ ಋಣವ ತೀರಿಸುವುದು ಹೇಗೆ ಯೋಗವೇ.
