ಯುವಶಕ್ತಿ ಎಜುಕೇಶನ್ ಸೊಸೈಟಿ (ರಿ)ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆ ಕಾಳಿಕಾಂಬ ಕಾರ್ಕಳ,ರಜತ ಮಹೋತ್ಸವ

ಕಾರ್ಕಳ:ಯುವಶಕ್ತಿ ಯೂತ್ ಕ್ಲಬ್ (ರಿ),ಯುವಶಕ್ತಿ ಮಹಿಳಾ ಮಂಡಲ,41 ನೇ ವಾರ್ಷಿಕೋತ್ಸವ ಮತ್ತುಯುವಶಕ್ತಿ ಎಜುಕೇಶನ್ ಸೊಸೈಟಿ (ರಿ) ಹಾಗೂ ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆ ಕಾಳಿಕಾಂಬ ಕಾರ್ಕಳ,ರಜತ ಮಹೋತ್ಸವದ ಪ್ರಯುಕ್ತ ಜನವರಿ 09 ಬೆಳಗ್ಗೆ ಗಂಟೆ 7.30ಕ್ಕೆ ಗಣಹೋಮ(ಶ್ರೀ ಲಕ್ಷ್ಮೀಶ ಕಲ್ಲೂರಾಯ) ಗಂಟೆ 9.30ಕ್ಕೆ ಧ್ವಜರೋಹಣ ತದನಂತರ ಕುಣಿಯೋಣ ಬಾರಾ ಸಿರಿಗನ್ನಡ ವೈಭವ ಪುರಸಭಾ ವ್ಯಾಪ್ತಿಯ ವಿವಿಧ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ನೃತ್ಯ ಸ್ಪರ್ಧೆಗಳು,ಸಂಜೆ ಗಂಟೆ 4.00ಕ್ಕೆ ಬಹುಮಾನ ವಿತರಣೆ ನಡೆಯಲಿರುವುದು.
ಜನವರಿ 10 2025, ಶುಕ್ರವಾರ ಬೆಳಿಗ್ಗೆ 9.30ಕ್ಕೆ ಕ್ರೀಡಾಕೂಟದ ಬಹುಮಾನ ವಿತರಣೆ ಸಂಜೆ ಗಂಟೆ 6.00ರಿಂದ ಯುವಶಕ್ತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ನೃರ್ತ್ಯ ಕಾರ್ಯಕ್ರಮಗಳು ಸಂಜೆ ಗಂಟೆ 7.00 ರಿಂದ ಸಭಾ ಕಾರ್ಯಕ್ರಮ
ತದನಂತರ ಯುವಶಕ್ತಿ ಸಮೂಹ ಸಂಸ್ಥೆಗಳಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು
ತದನಂತರ ನಮ್ಮ ತುಳುವೆರ್ ಕಲಾ ಸಂಘಟನೆ(ರಿ.) ನಾಟ್ಕದೂರು ಮುದ್ರಾಡಿ ಇವರಿಂದ ಕನ್ನಡ ನಾಟಕ ‘ಅವ್ವ ನನ್ನವ್ವ’ ನಡೆಯಲಿರುವುದು.
ಜನವರಿ 11 ಶನಿವಾರ ಬೆಳ್ಳಿಗೆ 9.30ಕ್ಕೆ ಸ್ನೇಹ ಸಮ್ಮಿಲನ ತದನಂತರ ಹಳೆ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿ ಪೋಷಕರು ಮತ್ತು ಯುವಶಕ್ತಿ ಸಮೂಹ ಸಂಸ್ಥೆಗಳ ಕೂಡುವಿಕೆಯೊಂದಿಗೆ
ತದನಂತರ ಮನೋರಂಜನಾ ಆಟಗಳು ನಡೆಯಲಿದೆ. ಸಂಜೆ ಗಂಟೆ 7 ರಿಂದ ಸಮರೋಪ ಸಮಾರಂಭ ತದನಂತರ ಯುವಶಕ್ತಿ ಸಮೂಹ ಸಂಸ್ಥೆಗಳಿಂದ ವಿಭಿನ್ನ ಶೈಲಿಯ ಮನೋರಂಜನಾ ಕಾರ್ಯಕ್ರಮಗಳು ಹಾಗೂ ಪಿಂಗರಾ ಕಲಾವಿದರ್ ,ಬೆದ್ರ ಇವರಿಂದ ‘ಕದಂಬ’ ನಾಟಕ ನಡೆಯಲಿರುವುದು.
ನಾನು ಕಲಿತ ಶಾಲೆಗೆ ರಜತ ಮಹೋತ್ಸವದ ಸಂಭ್ರಮ
ಶಾಲೆ ಎಂಬ ಆಲಯ
ವಿದ್ಯೆ ನೀಡುವ ದೇವಾಲಯ..!
ನನ್ನ ಶಾಲೆ ಸುತ್ತ ಚಿನ್ನ
ನನಗೆ ಬಹಳ ಸುಂದರ..!!
ಶಿಕ್ಷಕ – ಶಿಕ್ಷಕಿ ನಮಗಿಲ್ಲಿ ಹಿರಿಯರು
ಸಂತಸ ಕಲಿಕೆ, ತುಂಬಿದೆ ಪ್ರೀತಿಯ ಆಗರ…!
ನಮ್ಮ ಶಾಲೆ ಶಾಂತಿ ನೀತಿಯ ಹೊಂದಿದೆ
ನಿತ್ಯ ಹೊಸತನ ಯಾವುದೇ ತೊಂದರೆ ಇಲ್ಲದೆ…!
ಶಾಲೆ ಶಾಲೆ… ನಾನು ಓದಿದ ಶಾಲೆ….
ನನ್ನ ಅಚ್ಚುಮೆಚ್ಚಿನ ಶಾಲೆ….!
ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆ..!
ಧೀರಜ್ ರಾವ್ ಕಾರ್ಕಳ
ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ
ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ