
ಕೃಷ್ಣನ ಹುಟ್ಟು, ಜೀವನ ಇಡೀಯ ಮನುಕುಲಕ್ಕೆ ಆದರ್ಶ. ಕೃಷ್ಣಾಷ್ಠಮಿಯ ಪ್ರಯುಕ್ತ ಯುವಶಕ್ತಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಮುದ್ದುಕೃಷ್ಣ ರಾಧಾ ಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲಾಜಿ ಜ್ಯುವೆಲರ್ಸ್, ಕಾರ್ಕಳ ಇದರ ಮುಖ್ಯಸ್ಥರು ಶ್ರೀಮತಿ ಉರ್ಮಿಳಾ ಶಿಂದೆ ನೆರವೇರಿಸಿದರು.ಅಧ್ಯಕ್ಷತೆಯನ್ನು ಕಾರ್ಕಳದ ಯುವಶಕ್ತಿ ಮಹಿಳಾ ಮಂಡಲದ ಅಧ್ಯಕ್ಷರಾಗಿರುವ ಶ್ರೀಮತಿ ಪ್ರಮೀಳಾ ಪ್ರಶಾಂತ್ ಕೋಟ್ಯಾನ್ ವಹಿಸಿದ್ದರು. ಅತಿಥಿಗಳಾಗಿ ಪ್ರವೀಣ್ ಶೆಟ್ಟಿ, ಪ್ರಕಾಶ್ ರಾವ್, ಅಬ್ದುಲ್ ಖಲಿಕ್, ನಳಿನಾಕ್ಷಿ ಹೆಗ್ಡೆ, ಹರಿಣಿ, ಶಕುಂತಳ ರಾವ್, ಧೀರಜ್ ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿ ಸುರಕ್ಷಾ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಅನನ್ಯ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಶಕ್ತಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀವಿಜಯ್ ಶೆಟ್ಟಿ ವಹಿಸಿದ್ದರು.ಅತಿಥಿಗಳಾಗಿ ಶ್ರೀಮತಿ ಪ್ರಮೀಳಾ ಪ್ರಶಾಂತ್ ಕೋಟ್ಯಾನ್, ಅಬ್ದುಲ್ ಖಲಿಕ್, ನಳಿನಾಕ್ಷಿ ಹೆಗ್ಡೆ, ಶಕುಂತಳ ರಾವ್, ನವೀನ್ ಸುವರ್ಣ,ಲಕ್ಷ್ಮಿ ಪುರಾಣಿಕ್,ಧೀರಜ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಹಾಗೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಸಂಸ್ಥೆಯಲ್ಲಿ 20 ವರ್ಷಗಳಿಂದ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಸುರೇಶ್ ಕುಲಾಲ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು .ಹಳೆ ವಿದ್ಯಾರ್ಥಿ ಸುರಕ್ಷಾ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಸೋನಲ್ ವಂದನಾರ್ಪಣೆ ಸಲ್ಲಿಸಿದರು.













