
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಯಕ್ಷಕಲಾರಂಗ ಕಾರ್ಕಳ(ರಿ),ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇವರ ಸಹಯೋಗದೊಂದಿಗೆ ಯಕ್ಷಧ್ರುವ ಯಕ್ಷಶಿಕ್ಷಣ ತರಬೇತಿ ಅಭಿಯಾನ 2024 ರ ಉದ್ಘಾಟನಾ ಸಮಾರಂಭ ನಡೆಯಿತು.ಅಧ್ಯಕ್ಷ ಸ್ಥಾನವನ್ನು ವಹಿಸಿದ ಪುರಸಭಾ ಸದಸ್ಯಪ್ರದೀಪ್ ರಾಣೆಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.ಯಕ್ಷ ಕಲಾರಂಗದ ಕಾರ್ಯದರ್ಶಿ ಮಹಾವೀರ ಪಾಂಡಿಯವರು ಕಲೆಯ ಮಹತ್ವವನ್ನು ತಿಳಿಸಿದರು.ಯಕ್ಷಕಲಾರಂಗದ ಅಧ್ಯಕ್ಷರಾದ ವಿಜಯ ಶೆಟ್ಟಿ ,ಕೋಶಾಧಿಕಾರಿಗಳಾದ ಶ್ರೀವರ್ಮ ಅಜ್ರಿಯವರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ ಶುಭ ಹಾರೈಸಿದರು .ತರಬೇತುದಾರರಾದ ಅಜಿತ್ ಜೈನ್ ವಿದ್ಯಾರ್ಥಿಗಳಿಂದ ಹೆಜ್ಜೆಗಳನ್ನು ಹಾಕಿಸುವ ಮೂಲಕ ಚಾಲನೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಸ್ವಾಗತಿಸಿ ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ನೋಡಲ್ ಶಿಕ್ಷಕರಾದ ವೇದಾವತಿ ವಂದಿಸಿದರು.