ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ

ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಗತಿ ಪ್ರಾರಂಭಗೊಂಡಿತ್ತು. ನಾಟ್ಯ ಗುರುಗಳಾದ ಸತೀಶ್ ಮಡಿವಾಳ ಕಾರ್ಕಳ ಇವರು ದೀಪ ಬೆಳಗಿಸಿ ತರಗತಿಯನ್ನು ಉಧ್ಘಾಟಿಸಿದರು.
ಬಳಿಕ ಮಾತಾನಾಡಿದ ಅವರು ಇಂದು ಕರಾವಳಿ ಜಿಲ್ಲೆಯ ಗಂಡು ಕಲೆಯಾಗಿ ಮೂಡಿ ಬಂದ ಯಕ್ಷಗಾನ ವಿಶ್ವಮಾನ್ಯತೆಯನ್ನು ಪಡೆದುಕೊಂಡಿದೆ.. ವಿಶ್ವದೆಲ್ಲೆಡೆ ಕರಾವಳಿ ಜಿಲ್ಲೆಯ ಹೆಗ್ಗಳಿಕೆಯಾಗಿ ಸಿಧ್ಧಿ ಪ್ರಸಿದ್ಧಿ ಪಡೆದ ಪ್ರದರ್ಶನ ಕಲಾ ಪ್ರಕಾರವೆಂದರೆ ಅದು ಯಕ್ಷಗಾನ ಕಲೆ ಎಂದು ಹೇಳಿದರು. ಯಕ್ಷಗಾನ ಕಲೆಯು ಪರಿಪೂರ್ಣ ಸರ್ವಾಂಗ ಸುಂದರ ಕಲೆ, ಭಾರತೀಯ ಪುರಾಣ ಕಾವ್ಯಗಳ ನೀತಿ ಸಾರ ಸಂದೇಶಗಳನ್ನು ಮೌಲ್ಯಗಳನ್ನು ಅರಿತುಕೊಳ್ಳಲು ಆ ಕಾವ್ಯಗಳಲ್ಲಿ ಆಯ್ದ ಕಥೆಗಳನ್ನು ಉತ್ತಮ ಸಂದೇಶವನ್ನು ಹೊಂದಿ ಯಕ್ಷಗಾನ ಪ್ರಸ್ತುತಿಯೊಂದಿಗೆ ಕಲಾಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ. ಯಕ್ಷಗಾನ ಬಹು ಬೇಡಿಕೆಯ ಯೋಗ್ಯ ಕಲಾ ಪ್ರಕಾರವೆನಿಸಿದೆ.ಹಾಗಾಗಿ ಇಂದು ವಿದ್ಯಾರ್ಥಿಗಳು ಯಕ್ಷಗಾನ ಕಲಿಯುವುದರ ಮೂಲಕ ಮಾನಸಿಕ ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಯಕ್ಷಗಾನ ಒಂದು ಒಳ್ಳೆಯ ಮಾಧ್ಯಮವಾಗಿದೆ. ಯಕ್ಷಗಾನವನ್ನು ಅರಿತು ಕಲಿತರೆ ಮುಂದೆ ಯಕ್ಷಗಾನ ಕಲಾವಿದರಾಗಿ ಯಕ್ಷಗಾನ ಪ್ರೇಕ್ಷಕರಾಗಿ ಯಕ್ಷಗಾನ ಕಲಾಪೋಷಕರಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಬಳಿಕ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಆರ್ ನಾರಾಯಣ ಶೆಣೈ ಯವರು ಮಾತಾನಾಡುತ್ತಾ ಯಕ್ಷಗಾನ ಅಪ್ಪಟ ದೇಸಿ ಕಲೆಯಾಗಿದೆ .ಅಪ್ಪಟ ಕನ್ನಡ ಭಾಷಾ ಪ್ರೇಮದ ಕಲೆಯು ಆಗಿದೆ. ಹಾಗಾಗಿ ಯಕ್ಷಗಾನ ಕಲಿಕೆಯನ್ನು ಮೈಗೂಡಿಸಿಕೊಂಡರೆ ವಾಕ್ಪಟುತ್ವ ಕಲಾಭಿಜ್ಞತೆ ಪಾತ್ರ ಪ್ರಸ್ತುತಿ ಸಂಗೀತ ಸಾಹಿತ್ಯಜ್ಞಾನ ಗಾನ ನೃತ್ಯ ಕಲಾ ಪರಿಪೂರ್ಣತೆ ಹೀಗೆ ಹಲವು ಆಯಾಮಗಳನ್ನು ಪರಿಚಯಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾರಂಭದ ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿದ್ಯಾ ಕಿಣಿ ಯವರು ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿನಿ ಧಾರಿಣಿ ಉಪಾಧ್ಯ ಪ್ರಾರ್ಥನೆ ಗೈದರು.
