
ನವದೆಹಲಿ: ಬಹುತೇಕ ಸಮೀಕ್ಷೆಗಳು ಎನ್‌ಡಿ ಮೈತ್ರಿಕೂಟಕ್ಕೆ 350ಕ್ಕಿಂತ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದು ಆದರೆ ಎಎಪಿ ನಾಯಕ ಸೋಮನಾಥ್ ಭಾರ್ತಿ ಈ ಸಮೀಕ್ಷಾ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿ ಒಂದು ವೇಳೆ ಸಮೀಕ್ಷೆಗಳು ನಿಜವಾಗಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಯೂ ಪ್ರಧಾನಿಯಾದರೆ ತಾವು ತಲೆ ಬೋಳಿಸಿಕೊಳ್ಳುವುದಾಗಿ ಹೇಳಿದ್ದಾರೆ.
ನವದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸೋಮನಾಥ್ ಭಾರ್ತಿ, ಮತ ಎಣಿಕೆ ದಿನದಂದು ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಎಂದು ಸಾಬೀತಾಗಲಿದೆ. ಒಂದು ವೇಳೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ನಾನು ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ ಎಂದು ಸವಾಲೆಸೆದಿದ್ದಾರೆ.
ಮತ ಎಣಿಕೆ ನಡೆಯುವವರೆಗೆ ಜನ ಕಾಯಬೇಕು, ಪ್ರಧಾನಿ ಮೋದಿಯವರ ಭಯದಿಂದಾಗಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅವರು ಸೋಲುವುದನ್ನು ತೋರಿಸಲಾಗುತ್ತಿಲ್ಲ, ಆದ್ದರಿಂದ ಜೂನ್ 4 ರಂದು ಬರುವ ನಿಜವಾದ ಫಲಿತಾಂಶಗಳಿಗಾಗಿ ನಾವೆಲ್ಲರೂ ಕಾಯಬೇಕಿದೆ. ಬಿಜೆಪಿ ವಿರುದ್ಧ ಜನ ಭಾರಿ ಸಂಖ್ಯೆಯಲ್ಲಿ ಜನ ಮತ ಹಾಕಿದ್ದಾರೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.