
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು ನೇತೃತ್ವದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಂಗಮಂದಿರದಲ್ಲಿ ಮೇ 18 ಮತ್ತು 19ರಂದು ಎರಡು ದಿನಗಳ ಕಾಲ ಬೆಳಿಗ್ಗೆ ಗಂಟೆ 9.00ರಿಂದ ಸಂಜೆ 5.00ರವರೆಗೆ “ಅಪರಂಜಿ ಗ್ರಾಮೀಣ ಪ್ರತಿಭೆಗಳ ಕಾರಂಜಿ” ಮಕ್ಕಳ ಬೇಸಿಗೆ ಶಿಬಿರ – 2024 ಕಾರ್ಯಕ್ರಮ ಜರಗಲಿದೆ.ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಹಾಗೂ ಪ್ರಾತ್ಯಕ್ಷಿಕೆ ಬೇಸಿಗೆ ಬಿಸಿಲಿನಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡುವ ಬುದ್ದಿಗೆ ಇಂಬು ಕೊಡುವ, ಶರೀರಕ್ಕೆ ಚೈತ್ಯನ್ಯ ಹರಿಸುವ ಮಕ್ಕಳ ಕನಸು ಚಿಗುರುವ ಬೇಸಿಗೆ ಹಬ್ಬ ವಿಶೇಷ ರೀತಿಯಲ್ಲಿ ಜರಗಲಿದೆ.ಮಕ್ಕಳ ಬೇಸಿಗೆ ಶಿಬಿರದಲ್ಲಿ ಮನೋವಿಕಾಸ ಆಟಗಳು, ಅಭಿನಯ ಮತ್ತು ನಾವು, ರಂಗಭೂಮಿ ಶಿಕ್ಷಣ, ಗೂಡುದೀಪ ತಯಾರಿಕೆ, ಅಗ್ನಿಸುರಕ್ಷತೆ ಮತ್ತು ಮುಂಜಾಗ್ರತೆ ಬಗ್ಗೆ ಪ್ರಾತ್ಯಕ್ಷಿಕೆ, ಮಿಮಿಕ್ರಿ ತರಬೇತಿ, ಹಾಡೋಣ -ನಲಿಯೋಣ, ನೀತಿಕಥೆ, ಪೇಪರ್ ಕ್ರಾಪ್ಟ್ ಮುಂತಾದ ವಿಶೇಷ ಕಾರ್ಯಕ್ರಮಗಳು ಜರಗಲಿದೆ.ಹೆಸರು ನೊಂದಾಯಿಸುವವರು ಸಂಪರ್ಕಿಸಿ: 9902171267, 9591319024
ಮಕ್ಕಳ ಬೇಸಿಗೆ ಶಿಬಿರಕ್ಕೆ ಈಗಗಲೇ ನೋಂದಣಿ ಆರಂಭಗೊಂಡಿದೆ, ನೋಂದಣಿ ಸಂಪೂರ್ಣ ಉಚಿತವಾಗಿದೆ, ಹೆಸರು ನೊಂದಾಯಿಸಲು ಕೊನೆಯ ದಿನ ಮೇ 15,ಶಿಬಿರದಲ್ಲಿ 4ರಿಂದ 18 ವರ್ಷದ ವಿದ್ಯಾರ್ಥಿಗಳಿಗೆಭಾಗವಹಿಸಲು ಅವಕಾಶವಿದೆ, ಶಿಬಿರದಲ್ಲಿ ಉಚಿತ ಊಟ,ಉಪಹಾರದ ವ್ಯವಸ್ಥೆ ಇದೆ ಎಂದು ಸಂಘದಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಹಾಗೂ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರುಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.
