24.9 C
Udupi
Friday, March 21, 2025
spot_img
spot_img
HomeBlogಮೂಳೆಮುರಿತ ಶಸ್ತ್ರಚಿಕಿತ್ಸೆಗೆ ಔಷಧಿಯಾಗಿ ಮೆಹೆಂದಿ ಕೋನ್ ಅನ್ನು ಪ್ರಿಸ್ಕ್ರಿಪ್ಷನ್ನಲ್ಲಿ ಬರೆದುಕೊಟ್ಟ ವೈದ್ಯರು…!

ಮೂಳೆಮುರಿತ ಶಸ್ತ್ರಚಿಕಿತ್ಸೆಗೆ ಔಷಧಿಯಾಗಿ ಮೆಹೆಂದಿ ಕೋನ್ ಅನ್ನು ಪ್ರಿಸ್ಕ್ರಿಪ್ಷನ್ನಲ್ಲಿ ಬರೆದುಕೊಟ್ಟ ವೈದ್ಯರು…!

ಹಾಸನ: ನಗರದ ಹಿಮ್ಸ್ ನ ಸರ್ಜರಿ ವಿಭಾಗದ ವೈದ್ಯರೊಬ್ಬರು ಪ್ರಿನ್ಕ್ರಿಪ್ಷನ್ ಚೀಟಿಯಲ್ಲಿ ಒಂದು ಮೆಹೆಂದಿ ಕೋನ್ ಹಾಗೂ ಎರಡು ಕ್ರೇಪ್ ಬ್ಯಾಂಡೇಜ್ ತರುವಂತೆ ಬರೆದುಕೊಡಲಾಗಿದ್ದು ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕಾಲು ಮೂಳೆ ಮುರಿದು ಬ್ಯಾಂಡೇಜ್ ಹಾಕಿಕೊಂಡಿದ್ದ ರೋಗಿ ಅದನ್ನು ಹುಡುಕಿಕೊಂಡು ಮೆಡಿಕಲ್ ಶಾಪ್, ಬ್ಯಾಂಗಲ್ ಸ್ಟೋರ್ ಅಲೆಯುತ್ತಿದ್ದಾಗ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಹೆಬ್ಬಾರ್ ಅವರಿಗೆ ದೊರಕಿದ್ದರಿಂದ ಅವರು ಆ ಚೀಟಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಬೇಸರವನ್ನೂ ಹೊರ ಹಾಕಿದ್ದರು.

ಈ ಕುರಿತು ಹಿಮ್ಸ್ ವೈದ್ಯ ಆರ್ ಎಂ ಒ ಡಾ.ಪ್ರವೀಣ್ ಮಾಹಿತಿ ನೀಡಿದ್ದು ಪ್ರಿಸ್ಕ್ರಿಪ್ಷನ್ ನಲ್ಲಿ ಮೆಹಂದಿ ಕೋನ್ ಬರೆದಿರುವುದನ್ನು ಡಾಕ್ಟರ್ ಗಳು ವೆರಿಕೋಸ್ ವೈನ್ಸ್ ಎಂಬ ಕಾಯಿಲೆಯ ಶಸ್ತ್ರಚಿಕಿತ್ಸೆಯಲ್ಲಿ ಇನ್ಕಾಂಪೀಟೆಂಟ್ ಪರ್ಫೋರೇಟರ್ ಅನ್ನು ಗುರುತು ಮಾಡುವುದಕ್ಕಾಗಿ ಬಳಸಲಾಗುವುದು. ಒಂದು ವೇಳೆ ಈ ಜಾಗವನ್ನು ಆಪರೇಷನ್ ಗೂ ಮುನ್ನ ದಿನನಿತ್ಯ ಬಳಸುವ ಪೆನ್ನಿನ ಇಂಕ್ ನಲ್ಲಿ ಗುರುತು ಮಾಡಿದಲ್ಲಿ, ಆಪರೇಷನ್ ಮಾಡುವ ಜಾಗವನ್ನು ಬೀಟಾಡಿನ್ ಮತ್ತು ಸ್ಪಿರಿಟ್ ನಿಂದ ಸ್ಕ್ರಬ್ /ಶುಚಿಗೊಳಿಸಿದ ಸಂದರ್ಭದಲ್ಲಿ ಶೇ 100ಕ್ಕೆ 100 ರಷ್ಟು ಅಳಿಸಿ ಹೋಗುವುದು ಖಚಿತ.

ಆದ್ದರಿಂದ ಮೇಹಂದಿ/ಹೆನ್ನಾ ಇವುಗಳಿಂದ ಗುರುತಿಸಿದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಉಳಿಯುತ್ತದೆ. ಗುರುತು ಮಾಡಿರುವ ಜಾಗದಲ್ಲಿ ಡಾಕ್ಟರ್ಗಳು ಸುಲಭವಾಗಿ ಪರ್ಫೋರೆಟಾರ್ಗಳನ್ನು ಹುಡುಕುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ, ಈ ಪ್ರಿಸ್ಕ್ರಿಪ್ಷನ್ ನಲ್ಲಿ ಇರುವ ಮೆಹಂದಿಯನ್ನು ವೈದ್ಯಕೀಯ ಕಾರಣಗಳಿಗಾಗಿ ಉಪಯೋಗಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page