
ಕಾರ್ಕಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ , ಮಿಯ್ಯಾರು ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಪೂರ್ವಾಹ್ನ 10.30 ಘಂಟೆಯ ಶುಭಲಗ್ನದಲ್ಲಿ ಚಪ್ಪರ ಮುಹೂರ್ತವನ್ನು ಬೆಳ್ಮಣ್ಣು ಗುರುರಾಜ್ ತಂತ್ರಿಗಳು ನೆರವೇರಿಸಿಕೊಟ್ಟರು.ಅದಲ್ಲದೇ ಕೇಸರಿ ಧ್ವಜವನ್ನು ಅಲಂಕಾರ ಸಮಿತಿಯ ಸಂಚಾಲಕರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಬಿ. ಗಣಪತಿ ಹೆಗ್ಡೆ ಬೋರ್ಕಟ್ಟೆ,ಪೂನ ಸಮಿತಿಯ ಅಧ್ಯಕ್ಷರಾದ ಆನಂದ ಶೆಟ್ಟಿ ಮಂಜೆ ಮನೆ, ಮಾಧವ ಕಾಮತ್, ಸತ್ಯೇಂದ್ರ ನಾಯಕ್, ಕಿಶೋರ್ ಶೆಟ್ಟಿ, ಊರ ಹಿರಿಯರು ಮತ್ತು ಎಲ್ಲಾ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.


