
ಮುಂಬೈ: ಬಾಂಬೆ ಹೈಕೋರ್ಟ್ ಮಹಿಳೆಯ ಅನುಮತಿ ಇಲ್ಲದೆ ಆಕೆಯ ಫೋಟೋಗಳನ್ನು ಸರ್ಕಾರಿ ಜಾಹಿರಾತುಗಳಲ್ಲಿ ಬಳಸಿದ ಆರೋಪದಲ್ಲಿ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ನೋಟಿಸ್ ಜಾರಿಗೊಳಿಸಿದೆ.
ನಮ್ರತಾ ಅಂಕುಶ್ ಕವಾಲೆ ಎಂಬ ಮಹಿಳೆಯ ಫೋಟೋವನ್ನು ಆಕೆಯ ಅನುಮತಿ ಇಲ್ಲದೆ “ಷಟರ್ ಸ್ಟಾಕ್.ಕಾಮ್” ಬಳಸಿದ್ದು ಅದಾದ ಬಳಿಕ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಒಡಿಸ್ಸಾ ರಾಜ್ಯ ಸರ್ಕಾರಗಳು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜೊತೆಗೆ ಹಲವು ಖಾಸಗಿ ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ಆಕೆಯ ಫೋಟೋ ಬಳಸಿದೆ ಎಂದು ನಮ್ರತಾ ಅಂಕುಶ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ ವಿಭಾಗಿಯ ಪೀಠ ಷಟರ್ ಸ್ಟಾಕ್ ಸೇರಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದೆ.