
ಬೆಳಗಾವಿ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದು ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸದನದಲ್ಲಿ ಅಂಬೇಡ್ಕರ್ ಬಗ್ಗೆ ಚರ್ಚೆ ನಡೆಯುವಾಗ ಸಿಟಿ ರವಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಅಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್, ಮೋದಿ ಕೊಲೆಗಡುಕ ಎಂದಿದ್ದಾರೆ. ಬಳಿಕ ಸಿಟಿ ರವಿ ನೀನು ಪ್ರಾಸ್ಟಿಟ್ಯೂಟ್ ಅಂತ ಕರೆದಿದ್ದು ಮಹಿಳೆಗೆ ಆ ರೀತಿ ನಿಂದಿಸುವುದು ಚಿಕ್ಕಮಗಳೂರು ಸಂಸ್ಕೃತಿನಾ? ಭಾರತದ ಸಂಸ್ಕೃತಿನಾ? ಬಿಜೆಪಿ ಸಂಸ್ಕೃತಿನಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಸಭಾಪತಿಗಳ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಡಿಕೆಶಿ, ಸಭಾಪತಿಗಳ ವಿಚಾರವೂ ಸರಿ ಇಲ್ಲ. ಅವರು ಚರ್ಚೆಗೆ ಅವಕಾಶ ಕೊಡಬೇಕಿತ್ತು. ಏಕಾಏಕಿ ಅವರ ಹತ್ರ ಹೇಳಿಕೆ ತಗೊಂಡಿದಾರೆ. ಅವರು ಯಾವುದೇ ಪಕ್ಷದವರಲ್ಲ. ಸಭಾಪತಿ ಅಂದರೆ
ನಾನ್ ಪೊಲಿಟಿಕಲ್ ಮೆಂಬರ್. ಆದರೆ ಅವರ ನಡೆ ಸಭಾಪತಿಯಂತೆ ಕಾಣಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.