
ಮಹಾರಾಷ್ಟ್ರ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನಾತ್ಮಕ ಸಲಹೆಗಾರನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಾಪುರ ಅಪರಾಧ ದಳ ಮತ್ತು ಮಾಳವನ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ (ಆಗಸ್ಟ್ 30) ಮುಂಜಾನೆ ಕೊಲ್ಹಾಪುರದ ನಿವಾಸಿಯಾಗಿರುವ ಚೇತನ್ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ.
ಈ ಹಿಂದೆ, ಪೊಲೀಸರು ಗುತ್ತಿಗೆದಾರ ಮತ್ತು ವಾಸ್ತುಶಿಲ್ಪಿ ಜೈದೀಪ್ ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ಅವರನ್ನು ಆರೋಪಿಗಳೆಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ ಈ ನಡುವೆ ಚೇತನ್ “ನನಗೂ ವಿಗ್ರಹ ಕುಸಿದು ಬಿದ್ದಿರುವುದಕ್ಕೂ ಯಾವುದೇ ಸಂಬಂಧವಿಲ್ಲ, ಅಲ್ಲದೆ ಪ್ರತಿಮೆ ನಿರ್ಮಾಣದ ಕೆಲಸ ನಾನು ಮಾಡಿರುವುದಲ್ಲ. ಥಾಣೆ ಮೂಲದ ಕಂಪನಿಯು ಪ್ರತಿಮೆಗೆ ಸಂಬಂಧಿಸಿದ ಕೆಲಸವನ್ನು ಮಾಡಿದೆ, ಪ್ರತಿಮೆಯನ್ನು ಸ್ಥಾಪಿಸುವ ವೇದಿಕೆಯಲ್ಲಿ ಕೆಲಸ ಮಾಡಲು ನನ್ನನ್ನು ಕೇಳಲಾಗಿತ್ತು” ಎಂದು ಪಾಟೀಲ್ ಹೇಳಿದ್ದರು.













