
ಬೆಂಗಳೂರಿನ ಕೆಂಗೇರಿಯಲ್ಲಿ ಚಿನ್ನದಾಸೆ, ಸಾಲ ತೀರಿಸಲು ಹಾಗೂ ತನ್ನ ಪ್ರಿಯಕರನಿಗೆ ಹಣ ಕೊಡಬೇಕೆಂಬ ಕಾರಣಕ್ಕೆ ಯುವತಿಯೊಬ್ಬಳು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ. 24 ವರ್ಷ ಮೋನಿಕಾ ಹೆರಸಿನ ಯುವತಿ ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸಲು ಬಾಡಿಗೆ ಪಡೆದುಕೊಂಡಿದ್ದ ಮನೆಯ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದಯಷ್ಟೇ ಗುರುಮೂರ್ತಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಬಂದಿದ್ದಳು. ತನ್ನ ಪ್ರಿಯಕರನನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಸದ್ಯ ಮಾಲಕಿಯನ್ನು ಹತ್ಯೆಗೈದ ಮೋನಿಕಾ ಕೆಂಗೇರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.