
ಸಾಮಾನ್ಯವಾಗಿ ಮಹಿಳೆಯರು ಧಾರಾವಾಹಿ ನೋಡಲು ಕೂತರೆ ಪ್ರಪಂಚವೇ ಮುಳುಗಿ ಹೋದರೂ ಅವರಿಗೆ ಗೊತ್ತಾಗುವುದಿಲ್ಲ ಎನ್ನುವಷ್ಟು ತಮ್ಮ ನೆಚ್ಚಿನ ಸೀರಿಯಲ್‌ಗಳನ್ನು ನೋಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಅದು ಏನೆಂದರೆ ಮನೆಯೊಳಗೆ ಬಂದ ಹಾವೊಂದು ಹೆಡೆ ಎತ್ತಿ ಕುಳಿತು ಸತತ ಎರಡು ಗಂಟೆಗಳ ಕಾಲ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್‌ಗಳನ್ನು ಕುತೂಹಲದಿಂದ ವೀಕ್ಷಿಸಿದೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಮನೆಯೊಳಗೆ ನುಗ್ಗಿದ ಹಾವೊಂದು ಹೆಡೆ ಎತ್ತಿ ಕುಳಿತು ಸೀರಿಯಲ್ ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು. ಮನೆ ಯಜಮಾನ ಸ್ನೇಕ್ ಶಿವು ಅವರ ಬಳಿ ಬರೋಬ್ಬರಿ ಒಂದುವರೆ ಗಂಟೆಯಿಂದ ಒಂದು ಚೂರು ಅಲ್ಲಾಡದೆ ಟಿವಿ ನೋಡುತ್ತಾ ಕುಳಿತಿದೆ ಎಂದು ಹೇಳಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜೀ ಟಿವಿ ಅಭಿಮಾನಿ ಎಂಬ ಶೀರ್ಷಿಕೆಯನ್ನು ಬರೆದು ಹಂಚಿಕೊಂಡಿದ್ದಾರೆ.