
ಬೆಂಗಳೂರು: ಖ್ಯಾತ ಬಾಲಿವುಡ್ ಗಾಯಕ ಲಕ್ಕಿ ಅಲಿ ಅವರಿಗೆ ಸೇರಿದ ಭೂಮಿಯನ್ನು ರಾಜ್ಯದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ರೋಹಿಣಿ ವಿರುದ್ಧ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈ ಕುರಿತು ದೂರು ನೀಡಿರುವ ಲಕ್ಕಿ ಅಲಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಮತ್ತು ಮಧುಸೂದನ್ ರೆಡ್ಡಿ ನ್ಯೂ ಯಲಹಂಕ ಟೌನ್ ನಲ್ಲಿರುವ ತಮ್ಮ ಟ್ರಸ್ಟ್ ಭೂಮಿಯನ್ನು ರೋಹಿಣಿ ಸಿಂಧೂರಿ ಅವರ ಬೆಂಬಲದೊಂದಿಗೆ ಅತಿಕ್ರಮಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.