
ಮಣಿಪಾಲ: ಹೆರ್ಗ ಗ್ರಾಮದಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಹೆರ್ಗಾ ಗ್ರಾಮದ ಶ್ರೀನಿಧಿ (20) ಮಂಗಳೂರಿನ ಕಾಲೇಜಿನಲ್ಲಿ ಸಿಎ ವ್ಯಾಸಂಗ ನಡೆಸುತ್ತಿದ್ದು, ಇವರ ತಂದೆ ಮಹೇಶ್ ಅನಾರೋಗ್ಯದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಶ್ರೀನಿಧಿ ಆತ್ಮಹತ್ಯೆಗೆ ಶರಣಾಗಿದ್ದು ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.