
ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ಕುಂಜತ್ತೂರಿನ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಲ್ಲಿ ಬರುತ್ತಿದ್ದ ಆಂಬ್ಯುಲೆನ್ಸ್ ಎದುರಿನಿಂದ ಬರುತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ,ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಕೂಡಾ ದಾರುಣವಾಗಿ ಸಾವನ್ನಪ್ಪಿದ್ದಾರೆ.ಬೆಂಗಳೂರಿನಿಂದ ತ್ರಿಶೂರು ಭಾಗಕ್ಕೆ ಕಾರಿನಲ್ಲಿ ಸಂಚರಿಸುತಿದ್ದ ಗುರುವಾಯೂರು ನಿವಾಸಿಗಳಾದ ಶರತ್ ಮೇನೂನ್, ಶ್ರೀನಾಥ್ ಹಾಗೂ ಜೊತೆಯಾಗಿದ್ದ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಿಂದ ಕಾರು ಪೂರ್ಣವಾಗಿಯೂ ಜಖಂಗೊಂಡಿದ್ದು,ಸ್ಥಳೀಯರ ಹಾಗೂ ಅಗ್ನಿಶಾಮಕದಳ ಹಾಗೂ ಪೊಲೀಸರ ಕಾರ್ಯಾಚರಣೆಯಿಂದ ಕಾರಿನೊಳಗಿದ್ದವರನ್ನು ಹೊರ ತೆಗೆದು ಮಂಗಲ್ಪಾಡಿ ಶವಗಾರಕ್ಕೆ ಕೊಂಡೊಯ್ಯಲಾಗಿದೆ.ಕಾಸರಗೋಡುವಿನಲ್ಲಿ ಅಪಘಾತಕ್ಕೀಡಾದ ಗಾಯಾಳು ಹಾಗೂ ಜೊತೆಯಾಗಿದ್ದ ಇಬ್ಬರನ್ನು ಕಾಸರಗೋಡಿನಿಂದ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಾಗ ಆಂಬ್ಯುಲೆನ್ಸ್ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಅಪಘಾತ ಸಂಭವಿಸಿದೆ. ಆಂಬ್ಯುಲೆನ್ಸ್ ನಲ್ಲಿದ್ದವರು ಕೂಡಾ ಗಾಯಗೊಂಡಿದ್ದು ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಂಜೇಶ್ವರ:ಆಂಬುಲೆನ್ಸ್ ಹಾಗೂ ಕಾರು ಡಿಕ್ಕಿಕಾರಿನಲ್ಲಿದ್ದ ಮೂರು ಮಂದಿ ಸಾವು