ಕಥೆ (ಭಾಗ- 6)
ಚೇತನ್ ವರ್ಕಾಡಿ

ಮಂಗಳನ ಮುಖದರ್ಶನವಾಯಿತು. ಮಂಗಳ ಮನೆಯ ಕಡೆ ತನ್ನಷ್ಟಕೆ ನಡೆದು ಹೋಗುತ್ತಿದ್ದರೆ ಏನೋ ಆಲೋಚನೆಯಲ್ಲಿದ್ದ ಮಧು ಮಂಗಳಳ ಬಳಿ ಮುಟ್ಟುವಷ್ಟರಲ್ಲಿ ಸಡನ್ನಾಗಿ ಬ್ರೇಕ್ ಹಾಕಿಬಿಟ್ಟ.ಒಮ್ಮೆಲೆ ಬೆಚ್ಚಿ ಬಿದ್ದ ಮಂಗಳ ತಿರುಗಿ ಬೈಬೇಕನ್ನುವಷ್ಟರಲ್ಲಿ ಮಧುಕರ್ ಕಾಣಿಸಿಬಿಟ್ಟ.ಏನ್ ಸರ್ ಈ ತರ ಸಡನ್ನಾಗಿ ಕಾರ್ ನಿಲ್ಲಿಸಿದ್ರೆ ನಾವು ಕೂಡ ಹೆದರದೆ ಏನ್ ಮಾಡೋದು ನೀವೆ ಹೇಳಿ ಎಂದು ಹೇಳುವಷ್ಟರಲ್ಲಿ ಸ್ವಾರಿ ಅನ್ನೊ ಪದ ಮಧುವಿನ ಬಾಯಿಯಿಂದ ಬಂದೇ ಬಿಟ್ಟಿತು.ಇದನ್ನೇ ನೋಡುತ್ತಿದ್ದ ಸೋಮಶೇಖರರಾಯರು ಅಲ್ಲ ಕಣೊ ಮಧು ಏನಾಗಿದೆಯೊ ನಿನ್ಗೆ ಬೆಳಿಗ್ಗೆ ಹೊರಡುವಾಗ ಅಷ್ಟೊಂದು ಖುಷಿಯಿಂದ ಹೊರಟೆ ಮಧುಮಗನ ಕಳೆ ನಿನ್ನ ಮುಖದಲ್ಲಿ ಹರಿದಾಡುತ್ತಿತ್ತು ಆದರೆ ಇವಾಗ ಏನೋ ಅಲೋಚನೆಯಲ್ಲಿದ್ದ ಆಗೆ ಕಾಣ್ತಿಯ ಹೆಣ್ಣಿನ ಮನೆಯಲ್ಲೂ ನಿನ್ನ ನಡವಳಿಕೆ ನೋಡುವಾಗ ಭಿನ್ನವಾಗಿ ಕಾಣುತ್ತಿತ್ತು!ಇವಾಗ ನೋಡಿದ್ರೆ ಈ ತರ ಸಡನ್ನಾಗಿ ಬ್ರೇಕ್ ಹಾಕಿ ಈ ತರ ನಿಲ್ಲಿಸಿಬಿಟ್ಟೆ ಏನಾಗಿದೆಯೊ ನಿನ್ಗೆ ಎಂದು ಸೋಮಶೇಖರರಾಯರು ಹೇಳಿತ್ತಿದ್ದಂತೆಯೆ ಅದು ಅದು ಎಂದು ಮಾತು ಬಾರದೆ ಮೌನಿಯಾಗಿ ನಟಿಸಿದ ಮಧು.ನೀನು ಹೋಗಮ್ಮ ಎಂದು ಸೋಮಶೇಖರರಾಯರು ಮಂಗಳಳಿಗೆ ಹೇಳಿದಾಗ ತನ್ನ ದಾರಿಯತ್ತ ಮತ್ತೆ ಪ್ರಯಾಣ ಬೆಳೆಸಿದಳು ಮಂಗಳ.ಲೋ ಮಧು ಇನ್ನಾದರೂ ಸರಿ ನೋಡ್ಕೊಂಡು ಕಾರ್ ಡ್ರೈವ್ ಮಾಡೊ ನನ್ಗೆ ಮೊದ್ಲೆ ಸೊಂಟನೋವು ಎಂದು ಕಾರಿನ ಹಿಂದೆ ಕುಳಿತಿದ್ದ ಸುಗಂಧಿ ಮಗನ ಬಳಿ ಹೇಳಿದಾಗ!ಸುಮ್ನೆ ಅವನಷ್ಟಕೆ ನಕ್ಕ ಮಧು ಕಾರ್ ಸ್ಟಾಟ್ ಮಾಡಿ ಮಂಗಳ ಮರೆಯಾಗುವವರೆಗೂ ಸೈಡ್ ಮಿರರ್‌ನಿಂದ ನೋಡುತ್ತಾ ಮತ್ತದೆ ನೆನಪುಗಳನ್ನು ಮೆಲುಕು ಹಾಕುತ್ತಾ ತನ್ನ ಮನೆಯ ಕಡೆ ಪ್ರಯಾಣ ಬೆಳೆಸಿದನು….
ಅದು ಸಂಜೆಯ ಹೊತ್ತು ರಾಘವ ಹೊಲದಿಂದ ಬಂದವನೆ ಯಶೋಧಳನ್ನು ಕರೆಯಬೇಕಾದರೆ ಒಳಗಿನಿಂದ…..
(ಮುಂದುವರಿಯುವುದು)













