ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿಸುವ ವಿಚಾರ, ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಆಶ್ವಾಸನೆ

ಮಂಗಳೂರು; ತುಳುನಾಡಿನ ಜನಪದ ಕ್ರೀಡೆ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದು ಸಿಎಂ ರವರಿಗೆ ಆರತಿ ಬೆಳಗಿಸಿ, ಸಿಡಿಮಡ್ಡು ಸಿಡಿಸಿ ಅದ್ದೂರಿ ಸ್ವಾಗತ ನೀಡಲಾಯಿತು.
ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ಮಂಗಳೂರಿನ ನರಿಂಗಾನ ಎಂಬಲ್ಲಿ ನಡೆದ ಲವಕುಶ ಜೋಡು ಕರೆ ಕಂಬಳದಲ್ಲಿ ಭಾಗವಹಿಸಿದ ಸಿಎಂ ರವರಿಗೆ ಕಂಬಳ ಪೇಟಾ ತೊಡಿಸಿ, ಬೆಳ್ಳಿ ನೊಗ, ಬೆಳ್ಳಿಯ ಬೆತ್ತ ನೀಡಿ ಗೌರವಿಸಲಾಯಿತು. ತುಳುನಾಡಿನ ಸಂಬಳಕ್ಕೆ ನಿಷೇಧ ಹೇರಿದಾಗ, ನಮ್ಮ ಸರಕಾರ ನಿಷೇಧ ತೆರವುಗೊಳಿಸಿದೆ. ಇಷ್ಟಲ್ಲದೇ ,ಪ್ರತೀ ಕಂಬಳಕ್ಕೆ ಸರಕಾರ 5 ಲಕ್ಷ ಅನುದಾನ ನೀಡಿದೆ. ಜಾತಿ, ಮತ, ಭೇದವಿಲ್ಲದೆ ಎಲ್ಲಾ ಭಾಷೆ ಧರ್ಮ ಸಂಸ್ಕೃತಿಯರು ಕಂಬಳದಲ್ಲಿ ಭಾಗವಹಿಸುವ ಮೂಲಕ ಕಂಬಳವನ್ನು ಉಳಿಸಿ ಬೆಳೆಸಬೇಕು. ಇನ್ನು ತುಳು ಭಾಷೆಯನ್ನು ಎರಡನೇ ಭಾಷೆ ಮಾಡಬೇಕು ಎನ್ನುವುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಓಟಗಾರರಿಗೆ ವಿಮೆ ನೀಡಬೇಕು ಎಂದು ಕಂಬಳ ಸಮಿತಿ ಸಿಎಂ ಬಳಿ ಮನವಿ ಸಲ್ಲಿಸಿದರು.



















