
ಭಾರತೀಯ ವಾಯುಪಡೆ ಅಗ್ನಿವೀರರ ಇನ್‌ಟೇಕ್‌ಗಾಗಿ ನೋಂದಾಯಿಸಲು ಫೆಬ್ರವರಿ 2 ಅಂತಿಮ ದಿನಾಂಕವಾಗಿದ್ದು ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 2 ರ ಒಳಗೆ ಅಧಿಕೃತ ವೆಬ್‌ಸೈಟ್ agnipathvayu.cdac.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಲು ಜನವರಿ 27 ಕೊನೆಯ ದಿನಾಂಕವಾಗಿದ್ದು, ಅದನ್ನು ಫೆಬ್ರವರಿ 2 ರವರೆಗೆ ವಿಸ್ತರಿಸಲಾಗಿದೆ. ಅರ್ಜಿದಾರರು ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ 12 ನೇ ತರಗತಿಯಲ್ಲಿ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರಲ್ಲಿ ಒಟ್ಟಾರೆಯಾಗಿ ಕನಿಷ್ಠ 50 ಮತ್ತು ಇಂಗ್ಲಿಷ್‌ನಲ್ಲಿ ಶೇ. 50 ಅಂಕಗಳನ್ನು ಹೊಂದಿರಬೇಕು. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದಾಗಿದೆ. ಅಭ್ಯರ್ಥಿಗಳು 1 ಜನವರಿ 2005 ಮತ್ತು 1 ಜುಲೈ 2008 ರ ನಡುವೆ ಜನಿಸಿದವರಾಗಿದ್ದು ಅರ್ಜಿದಾರರು 550 ರೂ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಜಿಎಸ್‌ಟಿ ಕೂಡ ಜಾರಿಯಾಗಿದ್ದು ಈ ಶುಲ್ಕವನ್ನು ಆನ್‌ಲೈನ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್) ಮೂಲಕ ಪಾವತಿಸಬಹುದಾಗಿದೆ.





















