ಇಂದು ಸೆ.15 ಪದ ಪ್ರಧಾನ ಸಮಾರಂಭ

ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ, ನಗರ ಶಕ್ತಿ ಕೇಂದ್ರ ಕಾರ್ಕಳ ವತಿಯಿಂದ,ಇಂದು ಸೆ.15 ಸೋಮವಾರ ಸಂಜೆ 4 ಗಂಟೆಗೆ, ಶ್ರೀ ಬಿ ಮಂಜುನಾಥ್ ಪೈ ಸಭಾಂಗಣ ಕಾರ್ಕಳ ಇಲ್ಲಿ ಪದ ಪ್ರಧಾನ ಸಮಾರಂಭ ನಡೆಯಲಿದೆ.
ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ, ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ, ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಬಿಜೆಪಿಯ ಹಿರಿಯರಾದ ಬೋಳ ಪ್ರಭಾಕರ್ ಕಾಮತ್, ಹಿರಿಯ ನ್ಯಾಯವಾದಿಗಳಾದ ಎಂ.ಕೆ ವಿಜಯಕುಮಾರ್, ಬಿಜೆಪಿ ನಗರದ ನಿಕಟಪೂರ್ವ ಅಧ್ಯಕ್ಷರಾದ ರವೀಂದ್ರ ಮೊಯ್ಲಿ ಇವರ ಉಪಸ್ಥಿತಿ ಇರಲಿದೆ.













