
ಧಾರವಾಡ : ಭಾರತೀಯ ಪರಂಪರೆಯ ಪ್ರಕಾರ ಪ್ರಸ್ತುತ ನಾವು ಕ್ರೋಧಿನಾಮ ಸಂವತ್ಸರದಲ್ಲಿದ್ದು, ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಜನರಿಗೆ ದೇವರು, ಧರ್ಮ, ಭವಿಷ್ಯ, ದಿನ, ಕಾಲ, ಪಂಚಾಂಗದ ಮಹತ್ವವಿದೆ. ಇದು ಭಾರತೀಯ ಪದ್ದತಿಯಲ್ಲಿ ಕ್ರೋಧಿನಾಮ ಸಂವತ್ಸರವಾಗಿದೆ. ಇದು ಒಳಿತಿಗಿಂತ ಕೆಡುಕನ್ನು ಹೆಚ್ಚು ಮಾಡುತ್ತದೆ. ಭೂಮಿ, ಆಕಾಶ, ನೀರು, ವಾಯು, ಬೆಂಕಿ ಸೇರಿ ಐದು ಪಂಚಭೂತಗಳಿಂದ ತೊಂದರೆಯಿದೆ. ಇದನ್ನು ನಾನು ಆಕಾಶತತ್ವ ಎಂದು ಕರೆಯುತ್ತಾರೆ. ಶ್ರಾವಣದಲ್ಲಿ ಆಕಾಶ ತತ್ವದ ಬಗ್ಗೆ ಹೇಳುತ್ತೇನೆ. ಈ ಸಂವತ್ಸರದಲ್ಲಿ ಸುರಿದಲ್ಲಿಯೇ ಮಳೆ ಸುರಿಯುತ್ತದೆ. ಬೆಳೆ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಈಗ ಜಲಪ್ರಳಯ ಆಗಲಿದೆ. ಭೂ ಕುಸಿತ ಆಗಲಿದೆ. ವಾಯುನಿಂದಲೂ ವಿಪರೀತ ತೊಂದರೆಯಿದೆ. ಆದರೂ, ನಮ್ಮ ನಾಡಿಗೆ ಈ ಬಾರಿ ಸುಭೀಕ್ಷೆಯಿದೆ ಎಂದರು.ರಾಜಕಾರಣದಲ್ಲಿ ನಾನು ಹೇಳಿದಂತೆ ಅತಂತ್ರದಿಂದಲೇ ಕೂಡಿದೆ.
ಶ್ರಾವಣದಲ್ಲಿ ನಾನು ಈ ಬಗ್ಗೆ ರಾಜಕೀಯದ ಬಗ್ಗೆ ನುಡಿಯುತ್ತೇನೆ. ಅಶುಭವನ್ನು ಈಗಲೇ ನುಡಿಯಬಾರದು. ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣನ ಕೈಯಿಂದ ಕತ್ತರಿಸುತ್ತಾರೆ. ಆದರೆ, ಈಗ ಅಭಿಮನ್ಯುವಿನ ಹೆಂಡತಿ ಪಾರ್ಲಿಮೆಂಟಿಗೆ ಪ್ರವೇಶ ಮಾಡುತ್ತಾಳೆ. ಆದರೆ, ಈಗ ಪಾರ್ಲಿಮೆಂಟಿನಲ್ಲಿ ಧುರ್ಯೋಧನನ ತೊಡೆ ಮುರಿಸಿದ ಕೃಷ್ಣ ಇಲ್ಲ. ಆದ್ದರಿಂದ ಧುರ್ಯೋಧನನೇ ಗೆಲ್ಲುತ್ತಾನೆ ಎಂದು ಮಾಹಿತಿ ನೀಡಿದರು.
ನಾನು 4 ತಿಂಗಳ ಮೊದಲೇ ಹೇಳಿದಂತೆ ವಿದೇಶದಲ್ಲಿ ಭೀಕರ ಮಳೆಯಾಗ್ತದೆ, ಇಬ್ಬರು ಪ್ರಧಾನಿಗಳು ಸಾಯುತ್ತಾರೆ, ಸಾವು ನೋವುಗಳು ಸಂಭವಿಸುತ್ತವೆ, ದೊಡ್ಡ ದೊಡ್ಡವರಿಗೆ ಭಾರಿ ದುಃಖ, ನೋವು, ತಾಪ ಎದುರಾಗುತ್ತದೆ ಎಂದು ಹೇಳಿದ್ದೆನು. ಅದೇ ರೀತಿ ಆಗಿದೆ ಎಂದಿದ್ದಾರೆ.