24.6 C
Udupi
Sunday, March 16, 2025
spot_img
spot_img
HomeBlogಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ.) ಸೂಡ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ.) ಸೂಡ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಸಮಾಜಮುಖಿ ಕಾರ್ಯಗಳೊಂದಿಗೆ 28 ನೇ ವರ್ಷಕ್ಕೆ ಕಾಲಿರಿಸಿದ ಸೂಡ ಬ್ರೈಟ್ ಗ್ರೂಪ್ ಫ್ರೆಂಡ್ಸ್(ರಿ.) ಸೂಡ ಇದರ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 02.06.24 ಆದಿತ್ಯವಾರ ಸಂಜೆ 4.30 ಕ್ಕೆ ಸೂಡ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ವಠಾರದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ರವಿರಾಜ್ ರವರ ಅಧ್ಯಕ್ಷತೆಯಲ್ಲಿ ಆರಂಭವಾದ ಸಮಾರಂಭದಲ್ಲಿ ಕುಮಾರಿ ಪ್ರಾರ್ಥನಾ ಪ್ರಾರ್ಥನೆ ನೆರವೇರಿಸಿದರು. ಜೇರಿ ಎಲ್ ಡಿಸೋಜ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.
ಸಮಾರಂಭದ ಉದ್ಘಾಟಕರೂ ಸಂಘದ ಮಾರ್ಗದರ್ಶಕರು ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರು ಆಗಿರುವ ಶ್ರೀ ಶ್ರೀಶ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಾಶೀರ್ವಾದ ನೀಡಿದರು.


ಸಂಘದ ಗೌರವ ಸಲಹೆಗಾರರಾದ ಸಮಾಜರತ್ನ ಸೂಡ ಶಂಕರ್ ಕುಂದರ್ ರವರು, ನೂತನ ಅಧ್ಯಕ್ಷರಾದ ಶ್ರೀನಾಥ್ ಶೆಟ್ಟಿ, ಕಾರ್ಯದರ್ಶಿ ಅನೀಶ್ ಆಚಾರ್ಯ, ಕೋಶಾಧಿಕಾರಿ ಸೂರಜ್ ಕುಲಾಲ್, ಜೊತೆ ಕಾರ್ಯದರ್ಶಿ ಭರತ್ ದೇವಾಡಿಗ,ಮತ್ತು ಜೊತೆ ಕೋಶಾಧಿಕಾರಿ ಶ್ರೇಯಸ್ ದೇವಾಡಿಗರವರ ಹೆಸರನ್ನು ಘೋಷಣೆ ಮಾಡಿದರು.
ನಿರ್ಗಮನ ಅಧ್ಯಕ್ಷರಾದ ರವಿರಾಜ್ ರವರು ನೂತನ ಅಧ್ಯಕ್ಷರಿಗೆ ಸಂಘದ ದಾಖಲೆಗಳನ್ನು ನೀಡುವುದರ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಶ್ರೀನಾಥ್ ಶೆಟ್ಟಿಯವರು ಸಂಘವನ್ನು ಸಮರ್ಥವಾಗಿ ಮುನ್ನಡೆಸುವ ಆಶಯಕ್ಕೆ ಸರ್ವರ ಸಹಕಾರವನ್ನು ಯಾಚಿಸಿದರು.
ಮುಖ್ಯ ಅತಿಥಿಗಳಾದ ಪಲಿಮಾರು ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯರೂ ಅತ್ಯುತ್ತಮ ಕಾರ್ಯಕ್ರಮ ನಿರೂಪಕರೂ ಆಗಿರುವ ಸುಧಾಕರ ಶೆಣೈಯವರು ಸಂಘ ಸಂಘಟನೆಯ ಬಗ್ಗೆ ಮಾತನಾಡಿದರು. ಇನ್ನೋರ್ವ ಅತಿಥಿ ಪಳ್ಳಿ ಅಡಪಾಡಿಯ ಪ್ರತಿಷ್ಠಿತ ಸಂಸ್ಥೆ ಉತ್ಸಾಹಿ ಸಂಘ(ರಿ.) ಅಡಪಾಡಿ ಇದರ ಅಧ್ಯಕ್ಷರಾದ ಕಿಶನ್ ಪಳ್ಳಿ ಯವರು ಸಂಘ ಮತ್ತು ಸಂಘದ ಬೆಳವಣಿಗೆಯ ಸಮಸ್ಯೆಗಳನ್ನು ವಿವರಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಸಂಘದ ಗೌರವಾಧ್ಯಕ್ಷರಾದ
ಪ್ರದೀಪ್ ದೇವಾಡಿಗ ಹಾಗೂ ಜನನಿ ಮಹಿಳಾ ಮಂಡಳಿ ಸೂಡ ಇದರ ಸ್ಥಾಪಕಾಧ್ಯಕ್ಷೆ ಶ್ರೀಮತಿ ದೀಪಿಕಾ ಅಶೋಕ್ ಸಂಘದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ನಿರ್ಗಮನ ಅಧ್ಯಕ್ಷರಾದ ರವಿರಾಜ್ ರವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಸಂಘದಲ್ಲಿ ತಾನು ತೊಡಗಿಸಿಕೊಂಡ ರೀತಿ, ಸಂಘದ ಸದಸ್ಯರ ಸಹಕಾರ, ಊರವರ ಸಹಕಾರವನ್ನು ನೆನೆಯುತ್ತಾ ನೂತನ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರದ ಭರವಸೆಯನ್ನಿತ್ತರು.

ಅತಿಥಿಗಳಿಗೆ ಗಿಡ ನೀಡುವುದರ ಮೂಲಕ ಗೌರವಿಸಲಾಯಿತು. ಜೇರಿ.ಎಲ್ ಡಿಸೋಜ ವಂದನಾರ್ಪಣೆಗೈದರು. ರಾಘವೇಂದ್ರ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page