
ಬ್ರಹ್ಮಾವರ: ಮನೆಯ ಅಲ್ಮಾರಿಯಲ್ಲಿ ಇಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಮನೆ ಕೆಲಸದಾಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಶಾ ಎಸ್. ಪೂಜಾರಿ ಅವರು ತಮ್ಮ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಆರೂರು ಗ್ರಾಮದ ಲತಾ ಎಂಬ ಮಹಿಳೆಯನ್ನು ಕೆಲಸಕ್ಕೆ ಇಟ್ಟಿದ್ದರು. ಈ ವೇಳೆ ಮನೆಯ ಕಪಾಟಿನಲ್ಲಿ ಇಡಲಾಗಿದ್ದ ತಂದೆಯ ಸುಮಾರು 25 ಗ್ರಾಂ ಚಿನ್ನದ ಬ್ರಾಸ್ಲೆಟ್ ಹಾಗೂ 4 ಗ್ರಾಂ ಚಿನ್ನದ ಉಂಗುರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಘಟನೆ ಕುರಿತು ಲತಾಳನ್ನು ಪ್ರಶ್ನಿಸಿದಾಗ, ಆಕೆ ಚಿನ್ನವನ್ನು ತೆಗೆದು ಅಡವಿಟ್ಟಿದ್ದಾಗಿ ಒಪ್ಪಿಕೊಂಡು, ಅದನ್ನು ಮರಳಿ ತರಲು ಭರವಸೆ ನೀಡಿದ್ದಾಳೆ. ಆದರೆ ನಂತರ ಚಿನ್ನವನ್ನು ವಾಪಸು ನೀಡದೆ ಸುಮಾರು ₹3.5 ಲಕ್ಷ ರೂಪಾಯಿ ಮೌಲ್ಯ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.




















