
ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ವತಿಯಿಂದ ಇಂದು ಗ್ರಾಮೀಣ ಪ್ರದೇಶಗಳಿಗೆ ಉಚಿತ ನೀರು ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಹಿಂದೂ ಮುಖಂಡರಾದ ಬೋಳ ಪ್ರಶಾಂತ್ ಕಾಮತ್, ತ್ರಿವಿಕ್ರಮ ಕಿಣಿ ಕುಕ್ಕುಂದೂರು, ಮಧುರ ಹರೀಶ್ ನಾಯಕ್, ದಿನೇಶ್ ಶೆಟ್ಟಿ ಮತ್ತಿತರರು ಈ ಕಾರ್ಯಕ್ಕೆ ಚಾಲನೆ ನೀಡಿದರು.
ತುಳುನಾಡ ಧ್ವಜವನ್ನು ಹಾರಿಸುವ ಮೂಲಕ ಈ ಮಹತ್ತರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕಾರ್ಕಳ ಸುತ್ತ ಮುತ್ತಲಿನ 12 ಕಿ ಮೀ ವ್ಯಾಪ್ತಿಯಲ್ಲಿ ನೀರಿಲ್ಲದ ಕಡೆ ಕಾಲೋನಿಗಳಿಗೆ ಈ ನೀರು ಸರಬರಾಜು ಮಾಡಲಾಗುವುದು ಎಂದು ಈ ಸಂಘಟನೆ ತಿಳಿಸಿದೆ.
ಹಿಂದೂ ಮುಖಂಡರಾದ ಬೋಳ ಪ್ರಶಾಂತ್ ಕಾಮತ್ ರವರ ನೇತೃತ್ವದಲ್ಲಿ ಈಗಾಗಲೇ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರದೀಪ್ ಶೃಂಗಾರ್ ಕಾರ್ಕಳ, ಹರೀಶ್ ಆಚಾರ್ಯ, ಸಂದೀಪ್ ಅಜೆಕಾರ್, ಅವಿನಾಶ್ ಶೆಟ್ಟಿ, ಅನಂತ ಕೃಷ್ಣ ಶೆಣೈ, ಪ್ರವೀಣ್ ಕುಲಾಲ್, ವೆಂಕಟ್ರಮಣ ಪೈ, ಗುರುಪ್ರಸಾದ್ ಶೆಟ್ಟಿ ನಾರಾವಿ, ರವಿ ಶೆಟ್ಟಿ ಕುಕ್ಕುದ ಕಟ್ಟೆ, ಪ್ರಕಾಶ್ ಶೆಣೈ, ವಿಗ್ನೇಶ್ ಕಾಮತ್, ಶ್ರೀನಾಥ್ ಆಚಾರ್ಯಮತ್ತಿತರರು ಉಪಸ್ಥಿತರಿದ್ದರು

