
ಕಾರ್ಕಳ, ಜುಲೈ 25: ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಯೂರು ಶಾಸನದಕಲ್ಲು ಹೌಸ್ ನಿವಾಸಿ ಗೀತಾ ಆಚಾರ್ಯ ಅವರ ಮನೆ ಮೇಲೆ ಇಂದು ಬೆಳಿಗ್ಗೆ 6.15 ಕ್ಕೆ ಮರ ಬಿದ್ದು ಭಾರೀ ಹಾನಿ ಸಂಭವಿಸಿದೆ.
ಘಟನೆಯಿಂದ ಮನೆಯ ಮೇಲ್ಛಾವಣಿ ಸೇರಿದಂತೆ ಹಲವು ಭಾಗಗಳು ಹಾನಿಗೊಳಗಾಗಿದ್ದು, ಸುಮಾರು ₹1.5 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಘಟನೆಯಲ್ಲಿ ಗೀತಾ ಆಚಾರ್ಯ ಅವರ ಪತಿ ಜನಾರ್ಧನ್ ಆಚಾರ್ಯ ಅವರ ಕುತ್ತಿಗೆ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಬೋಳ ಜಯರಾಮ್ ಸಾಲಿಯಾನ್ ರವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ.ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಬೋಳ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಯರಾಮ್ ಸಾಲಿಯಾನ್ (ಬೋಳ), ಮಹಾಬಲ ಮೂಲ್ಯ (ಬೋಳ), ಶಂಬು ಮೂಲ್ಯ (ಬೋಳ), ರಘುನಾಥ್ ಕುಲಾಲ್ (ಬೋಳ), ಬೋಳ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಿರಣ್ ಶೆಟ್ಟಿ, ವಿಶಾಲ್ ಜೆ. ಸಾಲಿಯಾನ್,ನವಚೇತನ ಸೇವಾ ಬಳಗ ತೊಡರು ಅಧ್ಯಕ್ಷ ಕಿರಣ್ ಕುಲಾಲ್, ನಿತಿನ್ ಕುಲಾಲ್ ಬೋಳ , ಹರಿಶ್ಚಂದ್ರ ಆಚಾರ್ಯ, ಸುಕೇಶ್ ಬೋಳ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸ್ಥಳೀಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ತಾತ್ಕಾಲಿಕವಾಗಿ ಮನೆಯ ದುರಸ್ತಿ ಕಾರ್ಯದಲ್ಲಿ ಕೈಜೋಡಿಸಿ ಕುಟುಂಬಕ್ಕೆ ನೆರವಾದರು.



















































