
ಬೆಂಗಳೂರು: ಮೈಕ್ರೋ ಲೇಔಟ್ ನಲ್ಲಿರುವ ವೇಗಾಸಿಟಿ ಮಾಲ್ ನಲ್ಲಿ, ಪದವೀಧರನ್ನೊಬ್ಬ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಸುಹಾಸ್ ಅಡಿಗ(21) ಎಂಬ ಪದವೀಧರ ಮಧ್ಯಾಹ್ನ 2:30 ಸುಮಾರಿಗೆ ಮೆಗಾ ಸಿಟಿ ಮಾಲ್ ಮಾಲ್ ನ 4ನೇ ಮಾಡಿಯಿಂದ ಜನ ನೋಡುತ್ತಿದ್ದಂತೆ ಕೆಳಗೆ ಹಾರಿದ್ದು ತಲೆಗೆ ಗಂಭೀರ ಗಾಯವಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೂರು ತಿಂಗಳಿಂದ ಕಾಲೇಜಿನಲ್ಲಿ ವಿವಿಧ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ನಡೆಸುತ್ತಿದ್ದು ಕೆಲಸ ಸಿಗದ ಕಾರಣ ಸುಹಾಸ್ ಖಿನ್ನತೆಗೆ ಒಳಗಾಗಿದ್ದರೂ ಎಂದು ಪೋಷಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.