ಕಾರ್ಕಳದ ಆನೆಕೆರೆ ಬಸದಿಯಲ್ಲಿ, ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಕಾರ್ಕಳದ ಆನೆಕೆರೆ ಬಸದಿಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಕಾರ್ಕಳ ಮಂಡಲಾಧ್ಯಕ್ಷ ನವೀನ್ ನಾಯ್ಕ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಯೋಗಾಭ್ಯಾಸ ತರಗತಿಯನ್ನು ನಡೆಸಿಕೊಟ್ಟ ಯೋಗ ಶಿಕ್ಷಕ ಅಶೋಕ್ ಅವರನ್ನು ಕಾರ್ಕಳ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಉದಯ್ ಎಸ್. ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಬೋಳ, ಮಂಡಲ ವಕ್ತಾರ ರವೀಂದ್ರ ಮೊಯಿಲಿ, ಮಂಡಲ ಯೋಗ ದಿನ ಸಂಚಾಲಕ ಪ್ರವೀಣ್ ಸಾಲ್ಯಾನ್, ಒಬಿಸಿ ಮೋರ್ಚಾ ಅಧ್ಯಕ್ಷ ಪ್ರಸಾದ್ ಐಸಿರ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಬಲಿಪ, ಬಿಜೆಪಿ ಕಾರ್ಕಳ ನಗರಾಧ್ಯಕ್ಷ ನಿರಂಜನ್ ಜೈನ್, ಬಜೆಗೋಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಹಿರ್ಗಾನ, ಪ್ರಮುಖರಾದ ರವೀಂದ್ರ ಮಡಿವಾಳ, ಅನಂತ ಕೃಷ್ಣ ಶೆಣೈ, ಪುರಸಭಾ ಸದಸ್ಯ ಪ್ರಕಾಶ್ ರಾವ್ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.