31.8 C
Udupi
Thursday, April 23, 2026
spot_img
spot_img
HomeBlogಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ: ನಟ ಸುದೀಪ್

ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ: ನಟ ಸುದೀಪ್

ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕೆಲವು ದಿನಗಳಲ್ಲೇ ಸೀಸನ್ 11 ಆರಂಭವಾಗಲಿದ್ದು ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋ ನ ನಿರೂಪಕ ಬದಲಾಗುವ ಕುರಿತು ಸುದ್ದಿ ಎಲ್ಲೆಡೆ ಹಬ್ಬಿತ್ತು.

ಇಲ್ಲಿಯವರೆಗೂ ನಡೆದ 10 ಸೀಸನ್‌ಗಳನ್ನು ನಟ ಅಭಿನಯ ಚಕ್ರವರ್ತಿ ಸುದೀಪ್ ನಿರೂಪಕರಾಗಿ ನಡೆಸಿಕೊಂಡು ಬಂದಿದ್ದರು. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ. ಈ ಸಂದರ್ಭದಲ್ಲಿ ಸಿನಿಮಾಗೆ ನ್ಯಾಯ ಕೊಡಬೇಕಾ? ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕಾ? ಎಂದು ಪ್ರಶ್ನಿಸಿದರು.

ಸುದೀಪ್ ಅವರು ಈ ಮಾತನ್ನು ಆಡಿದ ಬೆನ್ನಲ್ಲೇ ಈ ಬಾರಿಯ ಶೋನದಲ್ಲಿ ನಿರೂಪಣೆ ಮಾಡ್ತಾರೋ ಇಲ್ಲವೊ ಎಂಬ ಪ್ರಶ್ನೆ ಎದುರಾಗಿದೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page