
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಂತಾವರ ಬಾರಾಡಿ ಒಕ್ಕೂಟ, ಮೂಡುಬಾಕ್ಯರು, ಜಾರಿಬೆಟ್ಟುಹಾಗೂ ಬಾರಾಡಿ ಪ್ರಗತಿ ಬಂಧು ಸಂಘಗಳ ಬೆಳ್ಳಿ ಹಬ್ಬ ಕಾರ್ಯಕ್ರಮ.
ಗಿರಿಜಮ್ಮ ಬಲ್ಲಾಳ್ ಕಲಾ ಮಂಟಪದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸಂಘದಲ್ಲಿ ವಯಸ್ಸಾಗಿ ನಿವೃತ್ತಿ ಹೊಂದಿರುವ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾದ ಧರ್ಮರಾಜ ಕಂಬಳಿಯವರು ಪ್ರಗತಿ ಬಂಧು ಸಂಘಗಳ ಮೂಲಕ ಸ್ವ ಅಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿಯ ಪೂಜ್ಯರ ಯೋಜನೆ ಮಹತ್ವವಾದದ್ದು ಅಂದಿನ ದಿನಗಳಲ್ಲಿ ಜನರ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯಾವಾಯಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಶ್ರೀ ಕ್ಷೇ. ಧ ಗ್ರಾ. ಯೋಜನೆಯ ಯೋಜನಾಧಿಕಾರಿಯವರಾದ ಹೇಮಲತಾರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ದೇವಾಡಿಗ, ವಲಯಾಧ್ಯಕ್ಷರಾದ ಜಯಕುಲಾಲ್ ಒಕ್ಕೂಟದ ಅಧ್ಯಕ್ಷರಾದ ನೊಣ್ಣಯ್ಯ, ನಿಕಟ ಪೂರ್ವ ಅಧ್ಯಕ್ಷರಾದ ಸುಬ್ರಮಣ್ಯ ಪಂಡಿತ್, ಸಂಘದ ಪ್ರಬಂಧಕರುಗಳಾದ ಸದಾನಂದ ಶೆಟ್ಟಿ, ಶೇಖರ ಪರವ, ಲಿಂಗಪ್ಪ ಪರವಾ ಹಾಗು ಸಂಯೋಜಕರುಗಳಾದ, ದಿನೇಶ್ ಸಪಳಿಗ, ಮನ್ಮಥ ಜಿ, ಕರುಣಾಕರ ಶೆಟ್ಟಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತತರಿದ್ದರು. ಕಾರ್ಯಕ್ರಮವನ್ನು ಸದಸ್ಯರಾದ ರೇವತಿಯವರು ಸ್ವಾಗತಿಸಿ, ಸೇವಾಪ್ರತಿನಿಧಿ ಸುನೀತಾರವರು ಧನ್ಯವಾದವಿತ್ತರು. ಮೇಲ್ವಿಚಾರಕರಾದ ಪ್ರಸಾದ್ ಕುಮಾರ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.













