
ಮುಂಬಯಿ ಮಹಾನಗರದಲ್ಲಿ ಬಂಟರ ಸಂಘದ ಮುಂಬಯಿ ಹೆಸರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದ್ದು ಸುಮಾರು ನಾಲ್ಕು ಲಕ್ಷಗಿಂತಲೂ ಅಧಿಕ ಬಂಟ ಸಮುದಾಯದವರಿದ್ದಾರೆ. ಇನ್ನೂ ಲಕ್ಷಾಂತರ ಸಮಾಜ ಬಾಂಧವರು ಸಂಘದ ಸದಸ್ಯರಾಗದೇ ಇದ್ದು, ಅಂಥವರು ಪ್ರಾದೇಶಿಕ ಸಮಿತಿಯನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರನ್ನಾಗಿ ಮಾಡಬೇಕಾಗಿದೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಈ ಕುರಿತು ಮಾತನಾಡಿ ಬಂಟರ ಸಂಘದ ಎಸ್.ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಮಗುವಿಗೆ ಸುಮಾರು 23 ವರ್ಷ ಕಲಿಯುವ ಅವಕಾಶ ಇದೆ. ಇದೀಗ ಒಂಭತ್ತು ಸಾವಿರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅನಂತರ ಉನ್ನತ ಶಿಕ್ಷಣ ಮಾಡುವುದಕ್ಕೆ ಮಹಾನಗರದಲ್ಲಿ ಎಲ್ಲಿಯೂ ಇರದ ಎಲ್ಲಾ ಸೌಲಭ್ಯಗಳು ಈ ಶಿಕ್ಷಣ ಸಂಸ್ಥೆಗಳಲ್ಲಿದ್ದು, ಒಂದು ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಬೊರಿವಲಿಯಲಿ ರೂಪಾಯಿ 180 ಕೋಟಿ ವೆಚ್ಚದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದು ಪ್ರತೀ ವಾರ ಅದಕ್ಕಾಗಿ ಡೋನೇಶನ್ ಕ್ಯಾಂಪ್ ನಡೆಸುತ್ತಿದ್ದಾರೆ. ಸಂಘಕ್ಕೆ ನೂರು ವರ್ಷ ಪೂರ್ತಿಯಾಗುವ ಸಂದರ್ಭದಲ್ಲಿ ಪ್ರತೀ ಪ್ರಾದೇಶಿಕ ಸಮಿತಿಯಲ್ಲಿ ನೂರು ಲಕ್ಷ ರೂಪಾಯಿ ವಿತರಿಸುವಂತಾಗಲಿ. ಒಂದು ಮಗು ಕಲಿತು ವಿದ್ಯಾವಂತನ್ನಾಗಿ ಉನ್ನತ ಉದ್ಯೋಗ ಗಳಿಸಿ ಸಮಾಜದಲ್ಲಿ ಬಡತನವೇ ಇಲ್ಲದಂತಾಗಲಿ ಎಂದು ಹೇಳಿದ್ದಾರೆ.
ಬಂಟರ ಸಂಘ ಮುಂಬಯಿ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ ನಮ್ಮ ಪ್ರಾದೇಶಿಕ ಸಮಿತಿಯ ತನ್ನ ಬೇಡಿಕೆಗಳಿಗೆ ಬಂಟರ ಸಂಘ ತತ್ ಕ್ಷಣ ಸ್ಪಂದಿಸಿ ಸಹಕರಿಸುತ್ತಿದೆ . ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಕರ್ ಶೆಟ್ಟಿಯವರ ನೇತೃತ್ವದಲ್ಲಿ ಇಂದು ನಮ್ಮ ಸಮಿತಿ ಮೂಲಕ ವಿತರಿಸಲು 30 ಲಕ್ಷ ರೂ. ಗಳಿಗಿಂತಲೂ ಹೆಚ್ಚು ಮೊತ್ತ ನೀಡಲಾಗಿದೆ . ಅವರಿಗೆ ಹಾಗೂ ಅವರ ತಂಡಕ್ಕೆ ಮತ್ತು ಸಂಘದ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು . ಈ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಇದರಿಂದ ಮಕ್ಕಳಿಗೂ ಸಂಘದ ಚಟುವಟಿಕೆಗಳ ಬಗ್ಗೆ ತಿಳಿಯವಂತ್ತಾಗುತ್ತದೆ . ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗೋಣ ಎಂದರು.
ಜೂನ್ 16 ರಂದು ಭಾರತ ರತ್ನ ಲತಾ ಮಂಗೇಶ್ಕರ್ ನಾಟ್ಯ ಸಭಾಗೃಹ, ಮಹಾಜನ್ ವಾಡಿ, ಮೀರಾರೋಡ್ ಇಲ್ಲಿ ಬಂಟರ ಸಂಘ ಮುಂಬಯಿ ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿಯ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಧವೆಯರಿಗೆ ಹಾಗೂ ವಿಕಲ ಚೇತನರಿಗೆ ಆರ್ಥಿಕ ಸಹಾಯವನ್ನು ವಿತರಿಸಲಾಗಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಇನ್ನು ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಮತ್ತವರ ತಂಡವನ್ನು ಅಭಿನಂದಿಸಬೇಕಾಗಿದೆ. ಇಂದಿನ ತುಂಬಿದ ಸಭೆಯನ್ನು ನೋಡುವಾಗ ನಮ್ಮವರಿಗೆ ಸಮಾಜದ ಮೇಲಿರುವ ಕಳಕಳಿಯ ಬಗ್ಗೆ ತಿಳಿಯುತ್ತದೆ. ಎಲ್ಲರೂ ಹೇಳಿದ ಹಾಗೆ ಸಹಾಯ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ಕೊಡುವ ಮೊತ್ತ ಹೆಚ್ಚಾಗಬೇಕು. ಅತೀ ಅಗತ್ಯವಿದ್ದವರು ಮಾತ್ರ ಇಂತಹ ಸಹಾಯ ಪಡೆದಲ್ಲಿ ಇದು ಸಾಧ್ಯ. ಸಮಾಜದಿಂದ ನಾವು ಪಡೆದು ಮುಂದೆ ಸಮಾಜಕ್ಕೆ ಅದಕ್ಕಿಂತಲೂ ಹೆಚ್ಚು ಹಿಂತಿರುಗಿಸುವಂತಾಗಲಿ. ನಾವು ಗಳಿಸಿದ ವಿದ್ಯೆ ನಮ್ಮ ನಿಜವಾದ ಆಸ್ತಿ. ನಮ್ಮ ಸಮಾಜದ ಮಕ್ಕಳು ಎಲ್ಲರೂ ಉತ್ತಮ ಶಿಕ್ಷಣ ಪಡೆಯಲಿ. ಶಿಕ್ಷಣಕ್ಕಾಗಿ ಬಂಟರ ಸಂಘವು ಎಲ್ಲಾ ರೀತಿಯ ಸಹಾಯವನ್ನು ನೀಡುತ್ತದೆ. ಕಠಿಣ ಪರಿಶ್ರಮದಿಂದ ಎಲ್ಲವೂ ಸಾಧ್ಯ ಎಂದು ಕಿವಿಮಾತು ನೀಡಿದರು.ಇನ್ನು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ ಅವರು ಮಾತನಾಡಿ ಬಂಟರ ಸಂಘವು ತನ್ನ ಸಮಾಜಕ್ಕಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದು, ಇದೇ ರೀತಿ ಇತರ ಎಲ್ಲಾ ಸಮಾಜದವರು ತಮ್ಮ ಸಮಾಜಕ್ಕೆ ಸಹಕರಿಸಿದಲ್ಲಿ ದೇಶದಲ್ಲಿ ಯಾವುದೇ ಸಮಸ್ಯೆ ಇರಲಾರದು. ಸರಕಾರಕ್ಕೆ ಎಲ್ಲವನ್ನೂ ಮಾಡಲು ಅಸಾಧ್ಯ. ಜೀವನದಲ್ಲಿ ಇನ್ನೊಬ್ಬರಿಗೆ ಸಹಕರಿಸುವ ಕೆಲಸವನ್ನು ಮಾಡಿದ್ದಲ್ಲಿ, ಮುಂದೆ ಯಾವುದಾದರೂ ರೀತಿಯಲ್ಲಿ ಅದಕ್ಕಿಂತ ಹೆಚ್ಚು ಸಿಗಲು ಸಾಧ್ಯ. ತನ್ನ ಸಮಾಜದ ಜವಾಬ್ದಾರಿಯನ್ನು ಬಂಟರ ಸಂಘ ಮುಂಬಯಿ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಪಶ್ಚಿಮ ವಲಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಖಾಂದೇಶ್ ಮಾತನಾಡುತ್ತಾ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯಿಂದ ಈ ಸಲ ಸುಮಾರು 1.80 ಕೋಟಿ ರೂಪಾಯಿಯನ್ನು ನೀಡಲಾಗಿದ್ದು ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಗೆ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಮುಂದೆ ಅರ್ಜಿಯ ಸಂಖ್ಯೆ ಕಡಿಮೆಯಾಗಿ ಮೊತ್ತವು ಹೆಚ್ಚಾಗುವುದರಿಂದ ನಿಜವಾಗಿ ಸಹಾಯ ಬೇಕಾದವರು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಮಕ್ಕಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು ಮತ್ತು ಪರಿವಾರದವರನ್ನು ಸನ್ಮಾನಿಸಿ ಬಹಳ ಅರ್ಥಪೂರ್ಣವಾದ ಜವಾಬ್ದಾರಿಯನ್ನು ಸಂಘ ನನಗೆ ನೀಡಿದೆ. ನನಗೆ ನೀಡಿದ ಜವಾಬ್ದಾರಿಯನ್ನು ನನ್ನ ಬಳಗದ ಎಲ್ಲಾ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಿಸುತ್ತೇನೆ. ನಮ್ಮ ಪ್ರಾದೇಶಿಕ ಸಮಿತಿಯಿಂದ 544 ಅರ್ಜಿಯನ್ನು ಸಲ್ಲಿಸಿದ್ದು ಸಂಘವು ಅದೆಲ್ಲವನ್ನೂ ಮಂಜೂರು ಮಾಡಿದೆ ಎನ್ನಲು ಸಂತೋಷವಾಗುತ್ತಿದೆ. ನಮ್ಮ ಸಮಿತಿಯ ವತಿಯಿಂದ ಬಂಟರ ಸಂಘಕ್ಕೆ 5 ಲಕ್ಷ ರೂಪಾಯಿಯನ್ನು ನೀಡಿದ್ದೇವೆ. ನಮ್ಮ ಇಂದಿನ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಬಂಟರ ಸಂಘ ಮುಂಬಯಿ, ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ, ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತಿರುವೆನು ಎಂದು ಹೇಳಿದರು.ಆರ್ಥಿಕ ಧನಸಹಾಯ ಚೆಕ್ಕನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮತ್ತು ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ್ ಶೆಟ್ಟಿ ಅವರು ಪ್ರಾದೇಶಿಕ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸಮಾಜದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲಾಯಿತು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಆರ್ ಶೆಟ್ಟಿ ತೆಳ್ಳಾರ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ, ಸ್ಥಳೀಯ ಮಾಜಿ ಶಾಸಕ ನರೇಂದ್ರ ಮೆಹ್ತಾ, ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸಂಪತ್ ಶೆಟ್ಟಿ ಪಂಜದ ಗುತ್ತು, ಪಶ್ಚಿಮ ವಲಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಖಾಂದೇಶ್, ಸ್ಥಳೀಯ ನಗರಸೇವಕ ಪ್ರಶಾಂತ್ ದಾಲ್ವಿ, ಸಂಘದ ಜೊತೆ ಕೋಶಾಧಿಕಾರಿ ಶಶಿಧರ್ ಕೆ. ಶೆಟ್ಟಿ ಇನ್ನಂಜೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕಾರ್ಯದರ್ಶಿ ಸಿಎ ಉತ್ತಮ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಅರವಿಂದ ಎ. ಶೆಟ್ಟಿ, ಕೋಶಾಧಿಕಾರಿ ಶಂಕರ್ ಶೆಟ್ಟಿ ಬೋಳ, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ದೇರಳಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ, ಯುವ ವಿಭಾಗ ಕಾರ್ಯಾಧ್ಯಕ್ಷ ವೃಷಬ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ಶೆಟ್ಟಿ, ಕೋಶಾಧಿಕಾರಿ ಅಮಿತ ಬಿ. ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಯಶಸ್ಸಿಗೆ ಕಿಶೋರ್ ಶೆಟ್ಟಿ ಕುತ್ಯಾರ್, ರವೀಂದ್ರ ಶೆಟ್ಟಿ ದೇರಳಕಟ್ಟೆ, ಗುಣಪಾಲ್ ಶೆಟ್ಟಿ ಕುಕ್ಕುಂದೂರು, ವೇಣುಗೋಪಾಲ್ ಶೆಟ್ಟಿ ಇನ್ನಂಜೆ, ಜಗದೀಶ್ ಶೆಟ್ಟಿ ಪಂಜಿನಡ್ಕ, ರಾಜೇಶ್ ಶೆಟ್ಟಿ ಕಾಪು ಮತ್ತು ಮಹಿಳಾ ವಿಭಾಗ ಯುವ ವಿಭಾಗದ ಸದಸ್ಯರು ಶ್ರಮಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಪಿ. ಶೆಟ್ಟಿ, ಕಾರ್ಯದರ್ಶಿ ಸುಮಂಗಳ ಕಣಂಜಾರ್, ಕೋಶಾಧಿಕಾರಿ ವಂದನಾ ಶೆಟ್ಟಿ, ಜೊತೆ ಕಾರ್ಯದರ್ಶಿ ಶಿಲ್ಪಾ ಶೆಟ್ಟಿ, ಜೊತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ, ಕಾರ್ಯದರ್ಶಿ ನಿರೀಕ್ಷಾ ಶೆಟ್ಟಿ, ಕೋಶಾಧಿಕಾರಿ ಸ್ವಾತಿ ಶೆಟ್ಟಿ, ಜೊತೆ ಕಾರ್ಯದರ್ಶಿ ಅನುಷ ಶೆಟ್ಟಿ, ಮಹಿಳಾ ವಿಭಾಗದ ಸಂಧ್ಯಾ ಶೆಟ್ಟಿ, ವೈದ್ಯಕೀಯ ಸಮಿತಿಯ ಡಾ. ರಿಯಾ ಶೆಟ್ಟಿ, ಕ್ರೀಡಾ ಸಮಿತಿಯ ಸಾಯಿ ಪ್ರಸಾದ್ ಪೂಂಜ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ರಾಜೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿ, ವಿವಾಹ ನೋಂದಣಿ ಆಶಾಲತಾ ಶೆಟ್ಟಿ, ಮಾಹಿತಿ ಹಾಗೂ ತಂತಜ್ಞಾನ ಅಭಿಜಿತ್ ಶೆಟ್ಟಿ, ಕ್ಯಾಟರಿಂಗ್ ವಿಭಾಗ ಕರುಣಾಕರ್ ಶೆಟ್ಟಿ, ಭಜನೆ ಸಮಿತಿ ಜಯಶ್ರೀ ಶೆಟ್ಟಿ, ಇ – ಉದ್ಯೋಗ ಕೃತಿಕ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ವಿಜಯ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಮಾಡಿದರು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮದ ನಿರೂಪಣೆ ಮಾಡಿದರು.