
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪಟ್ರಮೆ ಗ್ರಾಮದ ಸುಹಾನ (19) ಎಂಬ ಮುಸ್ಲಿಂ ಯುವತಿಯು ನಾಪತ್ತೆಯಾಗಿದ್ದು ಇದೀಗ ಹಿಂದೂ ಯುವಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಸುಹಾನ ಕಂಪ್ಯೂಟರ್ ಕ್ಲಾಸ್‍ಗೆ ಹೋಗಿದ್ದವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಳು. ಈ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೀಗ ಹಿಂದೂ ಯುವಕ ಹರೀಶ್ ಗೌಡ (24) ಎಂಬಾತನ ಜೊತೆ ಬೆಳ್ತಂಗಡಿಯ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.
ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ, ಸ್ವ ಇಚ್ಛೆಯಿಂದ ಹೋಗಿ ಮದುವೆ ಆಗಿರುವುದಾಗಿ ಯುವತಿ ಪೋಲಿಸರಿಗೆ ಹೇಳಿಕೆ ನೀಡಿದ್ದಾಳೆ ಎಂದು ವರದಿಯಾಗಿದೆ.



















