ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಣೆಹೊಳೆ, ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಎಣ್ಣೆಹೊಳೆ : ಇಂದಿನ ವಿದ್ಯಾರ್ಥಿಗಳೇ ನಾಳಿನ ಸತ್ಪ್ರಜೆಗಳು, ಸಂಸ್ಕಾರವಂತ ಜೀವನ ಧರ್ಮದೊಂದಿಗೆ ವಿನಯವಂತ ಗುಣನಡತೆಗಳನ್ನೂ ಮೈಗೂಡಿಸಿಕೊಂಡು ಮುನ್ನಡೆಯುವಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡಬೇಕು.ಕೇವಲ ಪುಸ್ತಕದ ಹುಳುಗಳಾದರೆ ಸಾಲದು ಜ್ಞಾನದ ಹಸಿವಿನೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಒತ್ತು ನೀಡಬೇಕು, ಬೆಂಬಲವಾಗಿ ಶಿಕ್ಷಣ ಸಂಸ್ಥೆ ಹಾಗೂ ಪೋಷಕರೆಲ್ಲರೂ ಜವಾಬ್ದಾರರಾಗಿ ನಡೆದುಕೊಳ್ಳಬೇಕು, ಪ್ರಾರಂಭೋತ್ಸವ ವಿದ್ಯೆಯೊಂದಿಗೇ ಆನಂದೋತ್ಸವವಾಗಿ ವಿದ್ಯಾರ್ಥಿಗಳ ಬಾಳಲ್ಲಿ ಸಂತಸ ನೀಡಲಿ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಎಣ್ಣೆಹೊಳೆ ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪತ್ರಕರ್ತರಾದ ರೇಷ್ಮಾ ಶೆಟ್ಟಿ ವಿಚಾರ ಮಂಡಿಸಿದರು.
ವಿದ್ಯಾಸಂಸ್ಥೆಗೆ ವಿಶೇಷ ನವೀನ ತಂತ್ರಜ್ಞಾನ ಅಳವಡಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯ ತರಗತಿಗಳನ್ನು ಆಯೋಜನೆ ಮಾಡುವ ನಿಟ್ಟಿನಲ್ಲಿ ಪ್ರಾರಂಭದ ದಿನದಿಂದಲೇ ಸಕಲ ಸಿದ್ಧತೆಗಳನ್ನು ನೆರವೇರಿಸಿಕೊಂಡಿದ್ದೇವೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲದೆ ಶಿಕ್ಷಣ ಪಡೆಯುವಲ್ಲಿ ಸಹಕಾರವನ್ನು ಖಂಡಿತ ನೀಡುತ್ತೇವೆ ಎಂದು ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರತಿಮಾ ನಾಯಕ್ ಮಾತನಾಡುತ್ತಾ ಸರ್ಕಾರಿ ಶಾಲೆಯ ಮೇಲೆ ವಿಶೇಷ ಪ್ರೀತಿ ಅಭಿಮಾನ ಹೊಂದಿ ಮಕ್ಕಳನ್ನು ಇಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವರೇ ಪೋಷಕರ ಮನ ಮಾಡಲಿ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ರವಿಪ್ರಕಾಶ್ ನಾಯಕ್ ಮುಖ್ಯೋಪಾಧ್ಯಾಯರಾದ ಅರುಂದತಿ, ಶಿಕ್ಷಕಿ ಭಾರತೀ ,ಆಶಾ ಶೆಟ್ಟಿ, ಸದಾನಂದ ಬೇಗಾರ್ ,ಹಳೆ ವಿದ್ಯಾರ್ಥಿಗಳಾದ ಶರತ್ ಶೆಟ್ಟಿ ಕೀರ್ತನ್ , ಹಾಗೂ ಪೋಷಕರು ಶಿಕ್ಷಕರೆಲ್ಲರೂ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆಯನ್ನು ನೆರವೇರಿಸಿಕೊಡಲಾಯಿತು. ಹಾಗೂ ಇದೇ ಸಂಸ್ಥೆಯಿಂದ ವರ್ಗವಾಗಿ ತೆರಳಿದ ಶಿಕ್ಷಕಿ ಶಾಂತಿ ಅವರು ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ನೆರವೇರಿಸಿದರು,ಸಂಸ್ಥೆಯ ಶಿಕ್ಷಕರಾದ ಸದಾನಂದ್ ಕೆಬಿ ಅವರು ನಿರೂಪಿಸಿ, ಭಾರತಿ ಅವರು ಸ್ವಾಗತಿಸಿ, ಸುಶ್ಮಿತಾ ಅವರು ವಂದಿಸಿದರು.