
ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಒಂದೊಂದಾಗಿಯೇ ಬೆಲೆ ಏರಿಕೆ ಬಿಸಿ ಮುಟ್ಟುತ್ತಿದ್ದು ಪೆಟ್ರೋಲ್ ಡೀಸೆಲ್ ಹಾಲಿನ ಬೆಲೆ ಏರಿಕೆ ಬಳಿಕ ಇದೀಗ ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಎಲ್ಲಾ ರಿಚಾರ್ಜ್ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ.
ಈಗಾಗಲೇ ಅಸ್ವಿತ್ವದಲ್ಲಿರುವ ಜನಪ್ರಿಯ ರಿಚಾರ್ಜ್ ಪ್ಲ್ಯಾನ್‌ಗಳನ್ನು ಶೇ. 25ರಷ್ಟು ದುಬಾರಿ ಮಾಡಲಾಗಿದ್ದು ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್ ಗ್ರಾಹಕರನ್ನು ಹೊಂದಿರುವ ಜಿಯೋ ತಮ್ಮ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಡ್ ಪ್ಲ್ಯಾನ್‌ಗಳಾಗಿವೆ.
155 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ 189 ರೂಪಾಯಿಗೆ ಬದಲಾಗಿದ್ದು ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ 249 ರೂಪಾಯಿ ಆಗಲಿದೆ. ಇನ್ನು ಡೇಟಾ ಬೆನಿಫಿಟ್‌ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅನಿಯಮಿತ 5G ಡೇಟಾವನ್ನು ನೀಡುತ್ತಿದ್ದ ರೂ 239 ಯೋಜನೆಯು ಇನ್ನು ಮುಂದೆ ಇರೋದಿಲ್ಲ. 239 ಪ್ಲಾನ್ ಈಗ ರೂ 299 ವೆಚ್ಚವಾಗಲಿದೆ ಮತ್ತು 28 ದಿನಗಳವರೆಗೆ ಮಾನ್ಯವಾಗಿರುತ್ತದೆ.
ಈಗ ಅನಿಯಮಿತ 5G ಡೇಟಾವು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಪ್ರಂಉಕವಾಗಿ ಗಮನಿಸಬೇಕಿದೆ. ಹೊಸ ಯೋಜನೆಗಳು ಜುಲೈ 3, 2024 ರಿಂದ ಜಾರಿಗೆ ಬರಲಿವೆ. ರಿಲಯನ್ಸ್ ಜಿಯೋ ಕೂಡ ಹೊಸ ಸೇವೆಗಳನ್ನು ಪ್ರಾರಂಭಿಸಿದೆ.
Jio JioSafe ಮತ್ತು JioTranslate ಅನ್ನು ಪ್ರಾರಂಭ: ಪ್ಲ್ಯಾನ್‌ಗೆ ಬೆಲೆ ಏರಿಕೆಯೊಂದಿಗೆ ಜಿಯೋ JioSafe ಮತ್ತು JioTranslate ಅನ್ನು ಘೋಷಿಸಿದೆ. JioSafe ಕರೆ, ಸಂದೇಶ ಕಳುಹಿಸುವಿಕೆ, ಫೈಲ್ ವರ್ಗಾವಣೆ ಮತ್ತು ಹೆಚ್ಚಿನವುಗಳಿಗಾಗಿ ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್ ಆಗಿದೆ ಮತ್ತು ತಿಂಗಳಿಗೆ 199 ರೂ.ಗೆ ಲಭ್ಯವಿರುತ್ತದೆ. JioTranslate ಎಂಬುದು ಧ್ವನಿ ಕರೆ, ಧ್ವನಿ ಸಂದೇಶ, ಪಠ್ಯ ಮತ್ತು ಚಿತ್ರವನ್ನು ತಿಂಗಳಿಗೆ 99 ರೂಪಾಯಿಗಳಿಗೆ ಭಾಷಾಂತರಿಸಲು ಬಹು-ಭಾಷಾ ಸಂವಹನ ಅಪ್ಲಿಕೇಶನ್ ಆಗಿದೆ. ಜಿಯೋ ತನ್ನ ಬಳಕೆದಾರರು ತಿಂಗಳಿಗೆ 298 ರೂಪಾಯಿ ಮೌಲ್ಯದ ಈ ಎರಡೂ ಅಪ್ಲಿಕೇಶನ್‌ಗಳನ್ನು ಒಂದು ವರ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ ಎಂದು ಹೇಳಿದೆ.