
ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಈಗಾಗಲೇ ಜೈಲು ಸೇರಿದ ಪ್ರಜ್ವಲ್ ರೇವಣ್ಣನ ಸೋದರ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.
ಎಚ್ ಡಿ ರೇವಣ್ಣ ಈಗಾಗಲೇ ಒಮ್ಮೆ ಜೈಲು ನೋಡಿ ಬಂದಿದ್ದು ಈಗಾಗಲೇ ಒಬ್ಬ ಪುತ್ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಇದೀಗ ಇನ್ನೊಬ್ಬ ಪುತ್ರ ಸೂರಜ್ ಕೂಡ ಜೆಡಿಎಸ್ ಕಾರ್ಯಕರ್ತನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರುವ ಭೀತಿ ಉಂಟಾಗಿದೆ.