
ಬೆಂಗಳೂರು: ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅಶ್ಲೀಲ ವಿಡಿಯೋ ಪ್ರಕರಣ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣನ ಬಂಧನದ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಜ್ವಲ್ ಎಲ್ಲಿದ್ದಾನೆ ಅಂತ ನಮಗೆ ಗೊತ್ತಿಲ್ಲ. ನಿಮಗೇನಾದರೂ ಮಾಹಿತಿ ಇದೆಯೇ? ಗೊತ್ತಿದ್ದರೆ ಹೇಳಿ, ನಮಗೂ ಸಹಾಯ ಆಗುತ್ತದೆ ಎಂದು ಹೇಳಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ಸಿಎಂ ನನಗೆ ಕೆಲವು ಸೂಚನೆ ನೀಡಿದ್ದು ಆದರೆ ಅವುಗಳನ್ನು ಬಹಿರಂಗಪಡಿಸುವಂತಿಲ್ಲ ಎಂದರು