“ಕ್ರಿಯೇಟಿವ್ ಪುಸ್ತಕ ಮನೆ”…ಕರಾವಳಿಯಿಂದ ರಾಜಧಾನಿಗೆ
ಪುಸ್ತಕಗಳ ಅನಾವರಣ ಮತ್ತು “ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ- 2024”

ಆರಂಭಿಕ ಅಲ್ಪ ಸಮಯದಲ್ಲೇ, ಓದುಗರ ನೆಚ್ಚಿನ ಕ್ರಿಯೇಟಿವ್ ಪುಸ್ತಕ ಮನೆ ಕರಾವಳಿ ಭಾಗದಲ್ಲಿ ಹೆಸರಾಗಿದೆ.

ಇದೀಗ ಕ್ರಿಯೇಟಿವ್ ಪುಸ್ತಕ ಮನೆ ಖ್ಯಾತಿ ಕರಾವಳಿಗೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯಂತ ಪಸರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ರಾಜಧಾನಿಯಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನ ಪುಸ್ತಕಗಳ ಅನಾವರಣ ಮತ್ತು ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ- 2024 ಅನ್ನು ಹಮ್ಮಿಕೊಳ್ಳಲಾಗಿದೆ.
ಮೌಲ್ಯಯುತ ಪುಸ್ತಕಗಳನ್ನು ಓದುಗ ವರ್ಗಕ್ಕೆ ನೀಡಬೇಕೆಂಬ ಆಸೆಗೆ ಬಹಳ ಪ್ರೀತಿಯಿಂದ ಅಮೂಲ್ಯ ಬರಹಗಳ ಪುಸ್ತಕಗಳನ್ನು ನೀಡಿದ ಕನ್ನಡದ ಪ್ರಸಿದ್ಧ ಬರಹಗಾರರ 6 ಕೃತಿಗಳು ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ (ಡಿಸೆಂಬರ್ 15) ಇಂದು ರಂದು ನಡೆಯಲಿದೆ.