ಗಣೇಶ್ ಜಾಲ್ಸೂರು

ಚೆಲುವ ಸ್ವಾತಂತ್ರ್ಯ ಸಂಭ್ರಮವಿಂದು
ಭಾರತೀಯರಿಗೆ ಸದಾ ಸಂತಸವಿಂದು
ಹಾರುವ ಬಾನ ಹಕ್ಕಿಗಳಾದರು
ಕುಣಿವ ಸುಂದರ ನವಿಲುಗಳಾದರು
ಲೋಕಕೆ ಸಾರುತಾ ಸತ್ಯ ಸಂದೇಶ
ಪಾವನ ಪುಣ್ಯ ಭೂಮಿ ಭಾರತ ದೇಶ
ನಮ್ಮ ರೈತರು ನಮ್ಮ ಸೈನಿಕರು
ನಮ್ಮ ಹೆಮ್ಮೆಯ ರಾಷ್ಟ್ರ ನಾಯಕರು
ಜೈ ಜವಾನ ಜೈ ಕಿಸಾನ ಜೈ ವಿಜ್ಞಾನ
ನಮ್ಮ ನಿತ್ಯ ಘೋಷ ಮಂತ್ರಗಳು
ಕಲೆ ಸಂಸ್ಕೃತಿಯ ಭವ್ಯ ಪರಂಪರೆ
ಕೇಳುವ ಸುಮಧುರ ಗಾನ ರಸಧಾರೆ
ನಮ್ಮ ಹಿತವ ಸದಾ ನಾವು ಕಾಯುತ
ಒಂದೇ ತಾಯಿ ಮಕ್ಕಳೆಂದು ಬಾಳುತಾ
ರಾಷ್ಟ್ರ ದೇವೋ ಭವ ಎಂದು ನಮಿಸುವ
ರಾಷ್ಟ್ರ ಪ್ರೇಮದ ಗೀತೆಯ ಮೊಳಗಿಸುವ
ರಾಷ್ಟ ರಕ್ಷಣೆಗೆ ಬೇಕು ದೃಢ ನಿಲುವಿನ ತ್ಯಾಗ
ಅಸಹಿಷ್ಣುತೆಗೆ ಇಲ್ಲವೇ ಇಲ್ಲ ನಮ್ಮಲ್ಲಿ ಜಾಗ
ವಂದೇ ಭಾರತ ಮಾತರಂ ಜಯ ಜಯ
ವಂದೇ ಭಾರತ ಮಾತರಂ ಜಯ ಜಯ













