
ಶಾಲೆಯ ವಿದ್ಯಾರ್ಥಿ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುತ್ತದೆ ವಿದ್ಯಾರ್ಥಿಗಳಲ್ಲಿ ಪ್ರೇರಣದಾಯಕದ ಮನೋಭಾವನೆಯನ್ನು ಬೆಳೆಸುತ್ತದೆ ಮತ್ತು ಕರ್ತವ್ಯದ ಜವಾಬ್ದಾರಿಯನ್ನು ವಿದ್ಯಾರ್ಥಿ ಸಂಘಟನೆಯು ಮನವರಿಕೆ ಮಾಡಿಕೊಡುತ್ತದೆ ಎಂದು ನಿವೃತ್ತ ಶಿಕ್ಷಕಿ ಸ್ನೇಹಲತಾ ಹೆಬ್ರಿ ಇವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಪಿ.ಆರ್. ಎನ್. ಅಮೃತ ಭಾರತಿ ಅನ್ನಪೂರ್ಣ ಸಭಾಂಗಣದಲ್ಲಿ ವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು . ಕಾರ್ಯಕ್ರಮದ ವೇದಿಕೆಯಲ್ಲಿ ಅಮೃತ ಭಾರತಿ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ, ಸಂಸ್ಥೆಯ ಮುಖ್ಯೋಪಾಧ್ಯಾಯಿನ ಶ್ರೀಮತಿ ಅಪರ್ಣಾ ಆಚಾರ್ ಮತ್ತು ಶ್ರೀಮತಿ ಶಕುಂತಲ ಕಿಣಿ ಉಪಸ್ಥಿತರಿದ್ದರು .ಮಂತ್ರಿ ಮಂಡಲದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಅಧ್ಯಕ್ಷರಾದ ಶೈಲೇಶ್ ಕಿಣಿಯವರು ಬೋಧಿಸಿದರು. ಕುಮಾರಿ ಭಾವನ ,10ನೇ ತರಗತಿ ನಿರೂಪಿಸಿದರು. ಲಾವಣ್ಯ 9ನೇ ತರಗತಿ ಸ್ವಾಗತಿಸಿದರು, ಶ್ರೇಯ ಹತ್ತನೇ ತರಗತಿ ಧನ್ಯವಾದಗೈದರು.
