
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಆರಂಭೋತ್ಸವ . ಪಿ. ಆರ್. ಎನ್ .ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶೈಕ್ಷಣಿಕ ವರ್ಷದ ಆರಂಭೋತ್ಸವ ನಡೆಯಿತು.
ಸಂಸ್ಕಾರಯುತ ಶಿಕ್ಷಣ ನಮ್ಮ ಧೇಯ್ಯವಾಗಿದೆ, ರಾಷ್ಟ್ರ ನಿರ್ಮಾಣ ಮಾಡಲು ತಮ್ಮನ್ನು ಅರ್ಪಿಸಿಕೊಂಡ ಸ್ವತಂತ್ರ ಹೋರಾಟಗಾರರ ಛಲವನ್ನು ನಮ್ಮಲ್ಲಿ ಒಗ್ಗೂಡಿಸಿಕೊಳ್ಳಬೇಕು . ಜೊತೆಗೆ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಮೃತ ಭಾರತಿ ಟ್ರಸ್ಟನ ಸದಸ್ಯರು ಬಾಲಕೃಷ್ಣ ಮಲ್ಯ ನುಡಿದರು .ಅಮೃತ ಭಾರತಿ ವಿದ್ಯಾಲಯದ ಆರಂಭೋತ್ಸವವನ್ನು ಭಾರತ ಮಾತೆ ,ಸರಸ್ವತಿ , ಓಂಕಾರ ಭಾವಚಿತ್ರಕ್ಕೆ ದೀಪಬೇಳಗಿಸಿ , ಪುಷ್ಪಾರ್ಚನೆ ಮಾಡುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು . ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರು CA.ಎಂ .ರವಿರಾವ್ , ಕಾರ್ಯದರ್ಶಿ ಗುರುದಾಸ್ ಶೆಣೈ , ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ , ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಸಂಚಾಲಕರು ರಾಜೇಶ್ ನಾಯಕ್ , ಅಮೃತ ಭಾರತಿ ವಸತಿ ನಿಲಯದ ಅಧ್ಯಕ್ಷರು ಯೋಗೀಶ್ ಭಟ್ , ಸದಸ್ಯರು ಸುಧೀರ್ ನಾಯಕ್ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ , ಶ್ರೀಮತಿ ಅಪರ್ಣ ಉಪಸ್ಥಿತರಿದ್ದರು . ನಿರೂಪಣೆ ಸಂಸ್ಥೆಯ ಸಂಸ್ಕೃತ ಗುರೂಜಿ ವೇದವ್ಯಾಸ ತಂತ್ರಿ ಮಾಡಿದರು. ಆರತಿ ಬೆಳಗಿ , ಹಣೆಗೆ ತಿಲಕ ಹಚ್ಚಿ , ಸಿಹಿ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.ಸೆಲ್ಪಿ ಕಾರ್ನರ್ , ರೈಲು ಮಾದರಿ ವಿದ್ಯಾರ್ಥಿಗಳಿಗೆ ತುಂಬಾ ಆಕರ್ಷಣೆ ಆಗಿತ್ತು.