
ಇಂದು ಬಾಲ ನಟನಾಗಿ ಅಭಿಮಾನಿಗಳ ಮನೆಗೆ ಇದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 50ನೇ ವರ್ಷದ ಜನ್ಮದಿನವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ನಟನ ಅಭಿಮಾನಿಗಳು, ಕುಟುಂಬಸ್ಥರು ಸೆಲೆಬ್ರಿಟಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
ಇತ್ತೀಚಿಗಷ್ಟೇ ನಟನ ಮೊದಲ ಸಿನಿಮಾ “ಅಪ್ಪು” ಚಿತ್ರ ಕೂಡ ಮರು ಬಿಡುಗಡೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟನ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಅನ್ನದಾನ, ರಕ್ತದಾನ ,ನೇತ್ರದಾನ ಮುಂತಾದ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ದಿನವನ್ನು ಸ್ಪೂರ್ತಿ ದಿನ ಇಂದು ಸರಕಾರ ಘೋಷಿಸಿದೆ. ಕಂಠೀರವ ಸ್ಟುಡಿಯೋದಲ್ಲಿ ನಿನ್ನೆ ರಾತ್ರಿಯಿಂದಲೇ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.