
ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚಿಗೆ ರಾಜಕೀಯದ ಕಡೆ ಹೆಚ್ಚು ಒಲವು ತೋರಿಸಿದ್ದು ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರರಂಗ ತೊರೆಯುವ ಬಗ್ಗೆ ಸುಳಿವು ನೀಡಿದ್ದಾರೆ.
‘ಸಿನಿಮಾ ಮಾಡೋದನ್ನು ನಿಲ್ಲಿಸಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಇನ್ನು ಮುಂದೆ ಅದರ ಕಡೆ ಗಮನ ಕೊಡುತ್ತೇನೆ, ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಇನ್ನು ಮುಂದೆ ನಾನು ಫುಲ್ ಟೈಮ್ ರಾಜಕಾರಣಿ’ ಎಂದು ಘೋಷಿಸಿದ್ದಾರೆ.