ಅರಾಜಕತೆ ಅಂತ್ಯ ಹಾಡಿದ ಮತದಾರ, ಗೂಂಡಾಗಿರಿ ರಾಜಕಾರಣಕ್ಕೆ ಕೊನೆ
ಕಾರ್ಯಕರ್ತರ ಅವಿಶ್ರಾಂತ ಶ್ರಮಕ್ಕೆ, ಅಭಿನಂದಿಸಿದ ಶಾಸಕ ವಿ. ಸುನಿಲ್ ಕುಮಾರ್

ಪಶ್ಚಿಮ ಬಂಗಾಲವನ್ನು ಸುದೀರ್ಘ ಕಾಲದಿಂದ ಕಾಡುತ್ತಿದ್ದ ಅರಾಜಕತೆಗೆ ಕೊನೆಗೂ ಅಲ್ಲಿನ ಮತದಾರ ಅಂತ್ಯ ಹಾಡಿದ್ದಾರೆ. ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಕನಸು ಇಂದು ನನಸಾಗಿದೆ ಎಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಸಚಿವ ,ಶಾಸಕ ವಿ.ಸುನಿಲ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾ ದೇಶದ ಮತಾಂಧರಿಗೆ ದೇಶದ ಹೆಬ್ಬಾಗಿಲು ತೆರೆದು ಸ್ವಾಗತಿಸಿ ಅವರನ್ನೇ ತನ್ನ ಮತಬ್ಯಾಂಕ್ ಆಗಿಸಿಕೊಂಡು ಕ್ರೂರ ದಬ್ಬಾಳಿಕೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿಯವರ ದುಷ್ಟ ಅಟ್ಟಹಾಸವನ್ನು ಕುಟ್ಟಿ ಬಿಸಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರ ನಿರಂತರ ಪ್ರಯತ್ನ ಅವರ್ಣನೀಯ. ತೃಣಮೂಲ ಕಾಂಗ್ರೆಸ್ ನ ಗೂಂಡಾಗಿರಿ ರಾಜಕಾರಣಕ್ಕೆ ಕೊನೆ ಹಾಡಲಾಗಿದೆ. ಅದೇ ರೀತಿ ಆಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಪುದುಚೇರಿ ಯಲ್ಲಿ ಎನ್ ಡಿಎ ಗೆಲುವು ಅಭೂತಪೂರ್ವ. ಒಟ್ಟಾರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಕಾರಣರಾದ ದೇವದುರ್ಲಬ ಕಾರ್ಯಕರ್ತರ ಅವಿಶ್ರಾಂತ ಶ್ರಮಕ್ಕೆ ವಂದನೆ – ಅಭಿನಂದನೆ ಎಂದು ಶಾಸಕ.ವಿ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















