
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿಗಾರರೊಂದಿಗೆ ಮಾತನಾಡಿ ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಪ್ರಕರಣ ನಿಜವಾಗಿಯೂ ಲವ್ ಜಿಹಾದ್ ಪ್ರಕರಣ ಆಗಿದ್ದು ನಾವು ಅದಕ್ಕೆ ಲವ್ ಜಿಹಾದ್ ಬಣ್ಣ ಕಟ್ಟುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ʻನೇಹಾ ಹೀರೇಮಠ್ ಪ್ರಕರಣವನ್ನು ಸಿಎಂ, ಡಿಸಿಎಂ ವೈಯಕ್ತಿಕ ಕಾರಣಗಳಿಗೆ ನಡೆದಿದೆʼ ಎಂಬುದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಷಾ ಕರ್ನಾಟಕ ಸಿಎಂ, ಡಿಸಿಎಂ ಅಲ್ಪ ಸಂಖ್ಯಾತರ ಮತಬ್ಯಾಂಕ್‌ಗಾಗಿ ಆ ರೀತಿ ಹೇಳಿದ್ದಾರೆ. ನಾನು ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ, ಕಾಲೇಜು ಕ್ಯಾಂಪಸ್‌ನಲ್ಲಿ ಈ ರೀತಿ ಕೊಲೆ ನಡೆಯುತ್ತದೆ ಎಂದರೆ ಅದು ವೈಯಕ್ತಿಕ ವಿಷಯ ಹೇಗಾಗುತ್ತದೆ? ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಸಿಗಬೇಕೋ ಬೇಡವೋ? ಎಂದು ಪ್ರಶ್ನಿಸಿದರಲ್ಲದೇ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಸತ್ಯ ಮುಚ್ಚಿಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.