
ಹುಬ್ಬಳ್ಳಿ: ಇಡೀ ರಾಜ್ಯವನ್ನೇ ಬಿಚ್ಚಿ ಬೀಳಿಸಿದ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತ ಸರ್ಕಾರ ಪ್ರಕರಣವನ್ನು ಸಿಐಡಿಗೆ ನೀಡಲಾಯಿತು.
ಕ್ರೈಂ ನಡೆದ ಸ್ಥಳದಲ್ಲಿ ಮಹಜರು ಮಾಡಿ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್ನನ್ನು 6 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಇದೀಗ ಆರೋಪಿ ಫಯಾಜ್ನ ಮತ್ತಷ್ಟು ಆತಂಕಕಾರಿ ವಿಷಯಗಳು ಬಯಲಾಗಿದೆ.ಆರೋಪಿ ಫಯಾಜ್ ಕೊಲೆ ಮಾಡುವ ಕೆಲವು ದಿನಗಳ ಮುನ್ನ ನೇಹಾ ಹಿರೇಮಠ ಮನೆ ಬಳಿಯೇ ಓಡಾಡಿ ನೇಹಾ ಚಲನವಲನವನ್ನು ಗಮನಿಸಿದ್ದಾನೆ. ಅಲ್ಲದೆ ಕೊಲೆ ಮಾಡುವ ಐದು ದಿನಗಳ ಮೊದಲೇ ಚಾಕುವೊಂದನ್ನು ಖರೀದಿ ಮಾಡಿದ್ದ ಎಂಬ ವಿಚಾರ ಬಯಲಾಗಿದೆ.ನೇಹಾಳಿಗೆ ಏಪ್ರಿಲ್ 18ರಂದು ಪ್ರಾಕ್ಟಿಕಲ್ ಎಕ್ಸಾಮ್ ಇದೆ ಎಂಬ ವಿಚಾರ ಅರಿತಿದ್ದ ಫಯಾಜ್ ಧಾರವಾಡದಿಂದ ಬೈಕ್ (KA24Y5781) ತೆಗೆದುಕೊಂಡು ಕಾಲೇಜ್ಗೆ ಬಂದಿದ್ದ. ಕೊಲೆ ಮಾಡುವ ಉದ್ಧೇಶದಿಂದಲೇ ರಸ್ತೆ ಕಡೆ ಮುಖ ಮಾಡಿ ಬೈಕ್ ನಿಲ್ಲಿಸಿದ್ದ. ಬಳಿಕ ಕಾಲೇಜ್ ಒಳಗಡೆ ಹೋಗಿ ಪ್ರಾಕ್ಟಿಕಲ್ ಎಕ್ಸಾಂ ನಡೆಯುವ ಹಾಲ್ನಲ್ಲಿ ಕೂತಿದ್ದ. ನೇಹಾ ಪರೀಕ್ಷೆ ಮುಗಿಸಿ ಹೊರಬರುವಾಗ ಫಯಾಜ್ ಮಾತನಾಡಲು ಪ್ರಯತ್ನಿಸಿದ್ದು ನೇಹಾ ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ರೊಚ್ಚಿಗೆದ್ದು ಚಾಕಿವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರಿಂದ ಫಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ.