
ಕೋಟಾ: ಈಗಾಗಲೇ ಈ ವರ್ಷದಲ್ಲಿ 12 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು ಇದೀಗ ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದ 16 ವರ್ಷದ ಸಂದೀಪ್ ಕುಮಾರ್ ಕುರ್ಮಿ ಎಂಬ ವಿದ್ಯಾರ್ಥಿ ಕೋಟಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬುಧವಾರ ರಾತ್ರಿ ಸಂದೀಪ್ ಪಿಜಿ ಕೋಣೆ ಬಾಗಿಲು ತೆರೆಯದನ್ನು ಕಂಡ ಸ್ನೇಹಿತರು ವಾರ್ಡನ್ ಗಮನಕ್ಕೆ ತಂದು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಸಂದೀಪ್ ಶವವನ್ನು ಹೊರತೆಗೆದಿದ್ದಾರೆ. ಸಂದೀಪ್ ಹಾಗೂ ಆತನ ಸೋದರ ಇಬ್ಬರೂ ಕೋಟಾದಲ್ಲಿ ಪ್ರತ್ಯೇಕ ಪಿಜಿಯಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರಿಗೆ ಪೋಷಕರು ಇಲ್ಲದ ಕಾರಣ ಇವರ ಸಂಬಂಧಿ ಹಣಕಾಸಿನ ನೆರವು ನೀಡುತ್ತಿದ್ದರು. ಕಳೆದ ವರ್ಷ 26 ವಿದ್ಯಾರ್ಥಿಗಳು ಅಸುನೀಗಿದ್ದರು. ಸಂದೀಪ್ ವಾಸಿಸುತ್ತಿದ್ದ ಪಿಜಿಯಲ್ಲಿ ಆತ್ಮಹತ್ಯೆ ತಡೆಯುವ ಸ್ಪ್ರಿಂಗ್ ಫ್ಯಾನ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.