
ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕ್ಕಾಗಿ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ತಿಳಿಸಿದ ಪ್ರಕಾರ ಮೇ 8 ಮತ್ತು ಮೇ 10 ರ ನಡುವೆ 10ನೇ ತರಗತಿ ರಿgಸಲ್ಟ್ ಪ್ರಕಟವಾಗಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕಾರಿಗಳು ಅನೌಪಚಾರಿಕವಾಗಿ ಫಲಿತಾಂಶಗಳನ್ನು ಮೇ 8 ಮತ್ತು 10 ರ ನಡುವೆ ಬಿಡುಗಡೆ ಮಾಡಲಾಗುವುದು ಎಂದು ಹೇಳುತ್ತಿದ್ಧಾರೆ. ಹಾಗೇನಾದರೂ ಆದರೆ, ಇಂದು ಅಥವಾ ನಾಳೆ ಸಂಜೆಯೊಳಗೆ ಎಸ್ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಮಂಡಳಿ ಬಿಡುಗಡೆ ಮಾಡಲಿದೆ. ಈ ಪ್ರಕಟಣೆ ಹೊರಡಿಸಿದ ಮಾರನೇ ದಿನ ಪತ್ರಿಕಾಗೋಷ್ಠಿ ನಡೆಸಿ, ವೆಬ್‌ಸೈಟ್ ಮೂಲಕವೂ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಕಟಿಸಲಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಪ್ರಕಟವಾಗುವ ಆನ್‌ಲೈನ್ ತಾಣಗಳಿವು – kseab.karnataka.gov.in ಮತ್ತು karresults.nic.in