
ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ( ಪ್ರೌಢಶಾಲಾ ವಿಭಾಗ) ಇಲ್ಲಿಯ ವಿದ್ಯಾರ್ಥಿನಿ ವಿನಮ್ರಾ ಆಚಾರ್ಯ ಇವರು 2023 – 24 ನೇ ಸಾಲಿನ ಎಸ್. ಎಸ್.ಎಲ್. ಸಿ ಪರೀಕ್ಷೆಯಲ್ಲಿ 606 ಅಂಕ ಗಳಿಸುವುದರ ಮೂಲಕ ಕನ್ನಡ ಮಾಧ್ಯಮ ವಿಭಾಗದಲ್ಲಿ ,ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಕಾರ್ಕಳ ತಾಲೂಕಿನ ತೀರಾ ಗ್ರಾಮೀಣ ಭಾಗದ ಈ ವಿದ್ಯಾರ್ಥಿನಿ ಕನ್ನಡ ಮತ್ತು ಹಿಂದಿ ವಿಷಯದಲ್ಲಿ 100 ಕ್ಕೆ 100. ಸಮಾಜ ವಿಜ್ಞಾನ 99 ಇಂಗ್ಲೀಷ್ 97 ಅಂಕಗಳಿಸಿ ಅದ್ವಿತೀಯ ಸಾಧನೆ ಮಾಡಿರುತ್ತಾರೆ.ಗ್ರಾಮೀಣ ಭಾಗದ ಈ ಸಂಸ್ಥೆಯ 46ವಿದ್ಯಾರ್ಥಿಗಳಲ್ಲಿ 43 ವಿದ್ಯಾಥಿಗಳು ಉತ್ತೀರ್ಣರಾಗಿರತ್ತಾರೆ. ಐವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ , 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 07 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 06 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ಇವರೆಲ್ಲರಿಗೂ ಶಾಲೆಯ ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಶ್ರೀ ಗುಣಪಾಲ ಕಡಂಬ ಕಾಲೇಜು ಸಿ.ಬಿ.ಸಿ ಅದ್ಯಕ್ಷರಾದ ಶ್ರೀ ಶಾಂತಿರಾಜ್ ಜೈನ್, ಶಾಲಾ ಎಸ್ ಡಿ ಎಮ್ ಸಿ ಸದ್ಯಸರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ ಶ್ಲಾಘಿಸಿದ್ದಾರೆ.